Bappanadu Viral Video: ಬಪ್ಪನಾಡು ದುರ್ಗಾಪರಮೇಶ್ವರಿ ರಥ ಏಕಾಏಕಿ ಕುಸಿತ: ಮೇಲಿದ್ದ ಅರ್ಚಕರನ್ನು ದೇವಿಯೇ ಕಾಪಾಡಿದ್ಳು

Krishnaveni K

ಶನಿವಾರ, 19 ಏಪ್ರಿಲ್ 2025 (14:02 IST)
Photo Credit: X
ಮಂಗಳೂರು: ಪ್ರಸಿದ್ಧ ಬಪ್ಪನಾಡು ದುರ್ಗಾಪರಮೇಶ್ವರಿ ದೇವಿಯ ರಥೋತ್ಸವದ ವೇಳೆ ರಥದ ಮೇಲ್ಭಾಗ ಕುಸಿದು ಬಿದ್ದು ಭಾರೀ ಅನಾಹುತ ಸಂಭವಿಸುವುದರಲ್ಲಿತ್ತು. ಆದರೆ ಆ ದೇವಿಯ ಕೃಪೆಯಿಂದ ಮೇಲಿದ್ದ ಅರ್ಚಕರು ಬಚಾವ್ ಆಗಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಮುಲ್ಕಿ ತಾಲೂಕಿನ ಬಪ್ಪನಾಡು ಕ್ಷೇತ್ರ ಇತಿಹಾಸ ಪ್ರಸಿದ್ಧ ದೇವಾಲಯವಾಗಿದೆ. ಇಲ್ಲಿಗೆ ಕರಾವಳಿ ಮೂಲದ ಬಾಲಿವುಡ್ ನಟರಾದ ಸುನಿಲ್ ಶೆಟ್ಟಿ, ಶಿಲ್ಪಾ ಶೆಟ್ಟಿ ಸೇರಿದಂತೆ ಘಟಾನುಘಟಿಗಳೂ ಭೇಟಿ ನೀಡುತ್ತಿರುತ್ತಾರೆ.

ಅತ್ಯಂತ ಶಕ್ತಿಶಾಲೀ ದೇವಿ ಎಂದೇ ಸ್ಥಳೀಯರು ನಂಬುತ್ತಾರೆ. ಈ ದೇವಿಯ ಜಾತ್ರೆಯ ರಥೋತ್ಸವದ ವೇಳೆ ಭಾರೀ ಅನಾಹುತ ಸಂಭವಿಸುವುದರಲ್ಲಿತ್ತು. ರಥ ಸಾಗುವಾಗ ಮೇಲ್ಭಾಗ ಇದ್ದಕ್ಕಿದ್ದಂತೆ ಕುಸಿದಿದೆ. ರಥದ ಸುತ್ತಲೂ ಸಾಕಷ್ಟು ಜನ ಸೇರಿದ್ದರು. ಮೇಲ್ಭಾಗದಲ್ಲೂ ಅರ್ಚಕರ ದಂಡೇ ಇತ್ತು.

ದೇವಿಯ ಆಶೀರ್ವಾದವೋ ಎಂಬಂತೆ ಯಾರಿಗೂ ಯಾವುದೇ ಅಪಾಯವೂ ಆಗಿಲ್ಲ. ಆದರೆ ಇದ್ದಕ್ಕಿದ್ದಂತೆ ನಡೆದ ಘಟನೆಯಿಂದ ಎಲ್ಲರೂ ಕೆಲವು ಹೊತ್ತು ಗಾಬರಿಯಾದರು. ಈ ವಿಡಿಯೋ ಇಲ್ಲಿದೆ ನೋಡಿ.

ಬಪ್ಪನಾಡು ಬ್ರಹ್ಮರಥದ ದುರ್ಘಟನೆ ????????#ಕನ್ನಡ_ಕರುನಾಡು
ವಿ.ಕೃ ????@DivyaJayaraj24 pic.twitter.com/IVfVdzkoSK

— ಕರ್ನಾಟಕ ಇತಿಹಾಸ (@KannadaNaduu) April 19, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ