ಬಾರ್, ರೆಸ್ಟೋರೆಂಟ್ ಗಳಿಗೆ ದೇವರು ಹೆಸರು ಬೇಡ ಎಂದ ಬಿಜೆಪಿಗೆ ಕಾಂಗ್ರೆಸ್ ಬೆಂಬಲ

ಶುಕ್ರವಾರ, 8 ನವೆಂಬರ್ 2019 (19:11 IST)
ಬಾರ್, ರೆಸ್ಟೋರೆಂಟ್ ಗಳಿಗೆ ದೇವರ ಹೆಸರು ಇಡದಂತೆ ಕಾನೂನು ತರುವ ವಿಚಾರವನ್ನು ಮುಜರಾಯಿ ಸಚಿವರು ನಡೆಸುತ್ತಿದ್ದು, ಇದಕ್ಕೆ ಕಾಂಗ್ರೆಸ್ ಮುಖಂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮುಜರಾಯಿ ಸಚಿವರ ನಡೆಗೆ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋಟಾ ಶ್ರೀನಿವಾಸ ಪೂಜಾರಿ ತಪ್ಪು ಹೇಳಿಲ್ಲ. ಅದು ಸರಿಯಾದ ನಿರ್ಧಾರವಾಗಿದೆ.

ದೇವರ ಹೆಸರು ಯಾಕೆ ಇಡಬೇಕು? ಅದು ಇನ್ನೊಂದು ತಪ್ಪು.

ಮುಜರಾಯಿ ಸಚಿವರ ಈ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ಇದೆ ಅಂತ ಹೇಳಿದ್ದಾರೆ.
ಬಾರ್ ಗೆ ದೇವರ ಹೆಸರು ಯಾಕೆ? ಅದನ್ನ ತೆಗೆಯಲಿ. ಸರ್ಕಾರ ಈ ಬಗ್ಗೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು.

ಬಾರ್ ಮಾಲೀಕರಿಗೆ ದೇವರ ಹೆಸರು ಇದ್ದರೂ ಅದನ್ನು ಬದಲಾವಣೆ ಮಾಡಲಿ ಅಂತ ಪೂಜಾರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ