ಇದುವರೆಗೂ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹೇಳಿದ್ದಾರೆ. ಇವರಲ್ಲಿ ಎಲ್‌ಇಟಿ ಉಗ್ರ ಸಂಘಟನೆ ಕಮಾಂಡರ್ ಯೂಸೂಫ್ ಕಾಂಥ್ರೋ ಸಹ ಸೇರಿದ್ದಾನೆ. ಗುರುವಾರ ಬೆಳಗ್ಗೆ ಆರಂಭವಾದ ಎನ್‌ಕೌಂಟರ್ ಇನ್ನೂ ಮುಂದುವರೆದಿದೆ. ಕಟ್ಟಡವೊಂದರಲ್ಲಿ ಇನ್ನೂ ಮೂವರು ಉಗ್ರರು ಅಡಗಿ ಕುಳಿತಿದ್ದಾರೆ. ಯೋಧರು, ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಬುದ್‌ಗಾಂವ್ ಪೊಲೀಸರು ನೀಡಿದ ನಿಖರ ಮಾಹಿತಿ ಅನ್ವಯ ಗುರುವಾರ ಉಗ್ರರಿಗಾಗಿ ತಪಾಸಣೆ ಆರಂಭಿಸಿದಾಗ ಗುಂಡಿನ ದಾಳಿ ಆರಂಭವಾಯಿತು. ಗುಂಡಿನ ಕಾಳಗದಲ್ಲಿ ಇದುವರೆಗೂ ನಾಲ್ವರು ಯೋಧರು, ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.