2 ವರ್ಷದ ಮಗು ಸೇರಿ ಒಂದೇ ಕುಟುಂಬದ 5 ಜನರ ಹತ್ಯೆ!
ಎರಡು ವರ್ಷದ ಹೆಣ್ಣು ಮಗು ಸೇರಿದಂತೆ ಒಂದೇ ಕುಟುಂಬದ 5 ಜನರನ್ನು ಕೊಲೆ ಮಾಡಿದ ಭೀಕರ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯಲ್ಲಿ ನಡೆದಿದೆ.
ಕ್ವಾಜಾಪುರ್ ಬಡಾವಣೆಯ ರಾಮ್ ಕುಮಾರ್ ಯಾದವ್ (55, ಪತ್ನಿ ಕುಸುಮ್ ದೇವಿ (52), ಪುತ್ರಿ ಮನೀಷಾ (25), ಸೊಸೆ ಸವಿತಾ (27) ಮತ್ತು ಮೀನಾಕ್ಷಿ (2) ಹತ್ಯೆಗೊಳಗಾದವರು.
ಮೊಮ್ಮಗಳು ಸಾಕ್ಷಿ (5) ಹತ್ಯೆಯಿಂದ ಪಾರಾಗಿದ್ದು, ಪುತ್ರ ಸುನೀಲ್ (30) ಘಟನೆ ನಡೆದಾಗ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲರ ತಲೆಗೂ ಬಲವಾಗಿ ಹೊಡೆದು ಹತ್ಯೆ ಮಾಡಲಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.