ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಚಾಲಕನ ಬರ್ಬರ ಹತ್ಯೆ!
ಡಿಪೋ ನಂಬರ್ 3ರ ಚಾಲಕ ನಾಗಯ್ಯ ಸ್ವಾಮಿ (45) ಹತ್ಯೆಯಾದ ವ್ಯಕ್ತಿ. ಬಸ್ ನಿಲ್ದಾಣದಲ್ಲಿ ಬಸ್ ತಂದು ನಿಲ್ಲಿಸಿದ ವೇಳೆ ಘಟನೆ ನಡೆದಿದ್ದು, 3 ಜನ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ನೂರಾರು ಜನರ ಮುಂದೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು, ಹಳೇ ವೈಷಮ್ಯ ಹಿನ್ನೆಲೆ ಈ ಕೃತ್ಯ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.