ಹೈಕಮಾಂಡ್ ನವರಿಗೂ ಗೊತ್ತೈತಿ ಯತ್ನಾಳ್ ಬೇಕು ಅಂತ: ಬಸನಗೌಡ ಪಾಟೀಲ್ ಯತ್ನಾಳ್

Krishnaveni K

ಭಾನುವಾರ, 15 ಡಿಸೆಂಬರ್ 2024 (15:29 IST)
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಬಂಡಾಯವೆದ್ದ ತಮ್ಮನ್ನು ಪಕ್ಷದಿಂದ ಹೊರಹಾಕುವ ಬಗ್ಗೆ ಮಾದ್ಯಮಗಳಿಗೆ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ರೇಣುಕಾಚಾರ್ಯ ಆಂಡ್ ಟೀಂ ಸಭೆ ನಡೆಸುತ್ತಿರುವ ಬಗ್ಗೆ ಮಾತನಾಡಿದ ಅವರು ಯಾರು ಬೇಕಾದರೂ ಸಭೆ ಮಾಡಲಿ. ಪಾಪ ಅವರಿಗೂ ಹತಾಶೆ ಆಗಿರಬೇಕು. ಅದಕ್ಕೇ ಸಭೆ ಮಾಡ್ತಾರಾ, ಮಾಡ್ಕೊಳ್ಳಿ ಬಿಡಿ ಎಂದಿದ್ದಾರೆ.

ಇಂದು ರೇಣುಕಾಚಾರ್ಯ ಆಂಡ್ ಟೀಂ ಸಭೆ ನಡೆಸುತ್ತಿರುವ ವಿಚಾರ ಕೇಳಿಬಂದ ಬೆನ್ನಲ್ಲೇ ಬಿವೈ ವಿಜಯೇಂದ್ರ ಟ್ವೀಟ್ ಮಾಡಿ ಯಾವುದೇ ಬಣದ ಹೆಸರು ಹೇಳಿಕೊಂಡು ಸಭೆ ಮಾಡುವಂತಿಲ್ಲ ಎಂದು ಖಡಕ್ ಆಗಿ ಸಂದೇಶ ನೀಡಿದ್ದರು.

ಇನ್ನು, ತಮ್ಮನ್ನು ಪಕ್ಷದಿಂದ ಕಿತ್ತು ಹಾಕುವ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಕೇಂದ್ರದಲ್ಲಿ ಇರುವವರಿಗೂ ಗೊತ್ತಿದೆ ಯತ್ನಾಳ್ ಪಕ್ಷಕ್ಕೆ ಯಾಕೆ ಬೇಕು ಏನು ಮಾಡಿದ್ದಾರೆ ಅಂತ. ಅವರೂ ಮೂರು-ನಾಲ್ಕು ಬಾರಿ ಸಂಸದರಾದ ಅನುಭವಿಗಳಿದ್ದಾರೆ. ಹಾಗೆಲ್ಲಾ ಯಾರದೋ ಮಾತು ಕೇಳಿ ಹೊರಗೆ ಹಾಕಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ