ಮನೆಯ ಆವರಣವನ್ನೇ ಕೊರೋನಾ ಕೇಂದ್ರವಾಗಿಸಿದ ಗೃಹಸಚಿವ ಬಸವರಾಜ ಬೊಮ್ಮಾಯಿ

ಶುಕ್ರವಾರ, 14 ಮೇ 2021 (10:03 IST)
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಬೆಡ್ ಗಾಗಿ ಜನ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.


ಇಂತಹ ಸಂದರ್ಭದಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ ಮಾಡಿದ ಕೆಲಸವೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬೊಮ್ಮಾಯಿ ತಮ್ಮ ಮನೆ ಪಕ್ಕದ ಸಭಾಂಗಣವನ್ನೇ ಕೊರೋನಾ ವಾರ್ಡ್ ಆಗಿ ಬದಲಾಯಿಸಿದ್ದಾರೆ.

ಶಿಗ್ಗಾಂವಿ ಪಟ್ಟಣದಲ್ಲಿರುವ ಬೊಮ್ಮಾಯಿ ನಿವಾಸದ ಪಕ್ಕದ ಸಭಾಂಗಣವನ್ನು ಕೊರೋನಾ ರೋಗಿಗಳ ಶುಶ್ರೂಷೆಗೆ 50 ಬೆಡ್ ಗಳ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸಚಿವರು ಈ ಕ್ರಮಕ್ಕೆ ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ