ಬಸವ ಜಯಮೃತ್ಯುಂಜಯ ಸ್ವಾಮೀಜಿಯಿಂದ ಸಿಎಂ ಬೊಮ್ಮಾಯಿ ಮನೆ ಎದುರು ಸತ್ಯಾಗ್ರಹ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಒಬಿಸಿ ಮೀಸಲಾತಿಗೆ ಹೋರಾಟ ಮಾಡುತ್ತಾ ಬಂದಿದ್ದೇವೆ. ಸರ್ಕಾರಕ್ಕೆ ನಾವು ಕೊಟ್ಟ ಗಡುವು ಮುಗಿದಿ ಅದ್ದರಿಂದ ಸಿಎಂ ಬೊಮ್ಮಾಯಿ ಅವರ ಮನೆ ಎದುರು ಸತ್ಯಾಗ್ರಹ ಮಾಡಲಾಗುವುದು ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ . ಈ ಕೂರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಸರ್ಕಾರಕ್ಕೆ ನಾವು ಕೊಟ್ಟ ಗಡುವು ಮುಗಿದಿದೆ. ಈಗಾಗಲೆ ರಾಜ್ಯಾದ್ಯಂತ ಹೋರಾಟ ಕೂಡಾ ಶುರುವಾಗಿದೆ.ಆದರು ಸಿಎಂ ಬೊಮ್ಮಾಯಿ ಅವರು ಯಾವುದೇ ರೀತಿ ನಮ್ಮ ಬೇಡಿಕೆ ಈಡೈರಸುವುದಕ್ಕೆ ಮುಂದಾಗುತ್ತಿಲ್ಲ. ಆದ್ದರಿಂದ ಜೂನ್ 27 ರಂದು ಹಾವೇರಿ ಜಿಲ್ಲೆಯಲ್ಲಿರುವ ಸಿಎಂ ಮನೆ ಎದುರು ಸತ್ಯಾಗ್ರಹ ಮಾಡಲಾಗುವುದು ಎಂದು ಹೇಳಿದ್ದಾರೆ, ಇನ್ನೂ ಯಡಿಯೂರಪ್ಪನವರನ್ನು ಈ ಸಮಾಜ ನಂಬಿತ್ತು ಆದ್ರೆ ಬೇಡಿಕೆ ಈಡೇರಿಸುವ ಅಷ್ಟರಲ್ಲಿ ಅವ್ರು ನಿರ್ಗಮಿತರಾದ್ರು, ಈಗ ಬೊಮ್ಮಾಯಿ ಅವರನ್ನ ನಂಬಿ ಮತ್ತೆ ಮೋಸ ಹೋಗ್ತಿದೀವಿ, ಬಜೆಟ್ ಅಧಿವೇಶನ ಅಷ್ಟರಲ್ಲಿ ನಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದಿದ್ರು ಆದ್ರೆ ಅದು ಕೂಡಾ ನೆರವೇರಿಲ್ಲ. ಇದರಿಂದ ಮಾತು ತಪ್ಪಿದ ಬೊಮ್ಮಾಯಿ ಅವರಿಗೆ ಇಡೀ ನಮ್ಮ ಹೋರಾಟದ ಕುರಿತು ಅಂತಿಮವಾದ ಪತ್ರ ಬರೆಯುತ್ತಿದ್ದೇವೆ ಆದ್ದರಿಂದ ನಮ್ಮ ಬೇಡಿಕೆ ಬಗ್ಗೆ ಕೊನೆ ನಿಲವು ತಿಳಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಸವ ಜಯಮೃಂತಜಯ ಸ್ವಾಮೀಜಿ ಅಂತಿಮ ಗಡುವು ನೀಡಿದ್ದಾರೆ.