ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅದೆಷ್ಟು ಟೀಕೆ ಮಾಡಿದ್ರೂ, ಪ್ರಯೋಜನ ಇಲ್ಲ ಬಿಡಿ. ಅದ್ರಲ್ಲೂ, ಪಾಲಿಕೆಯನ್ನ ಥೇಟ್ ಉಡದಂತೆ ಹಿಡಿದಿರೋ ಕಸದ ಪ್ರಾಬ್ಲಂ ಹೆಜ್ಜೆ ಹೆಜ್ಜೆಗೂ ಕಾಡ್ತಿದೆ. ಈಗಾಗ್ಲೇ ಸಿಟಿಯಲ್ಲಿ ಕಸದ ಸಮಸ್ಯೆ ಜಾಸ್ತಿ ಆಗ್ತಿದೆ. ಇನ್ಮೇಲೆ ಈ ಸಮಸ್ಯೆ ಇನ್ನು ಹೆಚ್ಚಾಗಲಿದೆ.
ಅರೆ ಬೆಂಗಳೂರು ಗಾರ್ಬೇಜ್ ಸಿಟಿಯಾಗಲಿದ್ಯಾ? ಏಕೆ ಎಂಬ ಪ್ರಶ್ನೆ ಕಾಡೋದು ಸಹಜ ಕಾರಣ ಇಷ್ಟೇ ಗುತ್ತಿಗೆದಾರರ ವಿರುದ್ಧ ಬಿಬಿಎಂಪಿ ತೋರುತ್ತಿರುವ ಧೋರಣೆ. ಸರಿಯಾದ ಸಮಯಕ್ಕೆ ಬಿಲ್ ಕ್ಲಿಯರ್ ಮಾಡದ ಬಿಬಿಎಂಪಿ ವಿರುದ್ಧ ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶುಕ್ರವಾರದಿಂದ ಕಸ ವಿಲೇವಾರಿ ಕೆಲಸ ನಿಲ್ಲಿಸಲು ಗುತ್ತಿಗೆದಾರರು ನಿರ್ಧಾರ ಮಾಡಿದ್ದಾರೆ.