ತುಮಕೂರು ಫ್ಲೈಓವೇರ್ ಒಪೆನ್ ಮಾಡಿ -ಸಿಎಂಗೆ ಸುರೇಶ್ ಕುಮಾರ್ ಪತ್ರ

ಮಂಗಳವಾರ, 15 ಫೆಬ್ರವರಿ 2022 (14:44 IST)
ತುಮಕೂರು ರೋಡ್ ಸಂಪರ್ಕ ಕಲ್ಪಿಸುವ ಡಾ. ಶಿವಕುಮಾರ್ ಸ್ವಾಮೀಜಿ ಫ್ಲೈ ಓವರ್ ತಿಂಗಳುಗಳೇ ಕಳೆದ್ರೂ ಬೆಂಗಳೂರು- ತುಮಕೂರು ಮೇಲ್ಸೇತುವೆ ಕಾಮಗಾರಿ ಮುಗಿದಿಲ್ಲ. ಇದರಿಂದ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವ ವಾಹನ ಸವಾರರು ಟ್ರಾಫಿಕ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಮಸ್ಯೆ ಅರಿಯಲು ನಾನು 8ನೇ ಮೈಲಿ ಮೆಟ್ರೋ ನಿಲ್ದಾಣದ ಸಮೀಪವಿರುವ 102 ನೇ ಪಿಲ್ಲರ್ ಗೆ ಭೇಟಿ ನೀಡಿದ್ದೆ. ಸುಮಾರು 50 ರಿಂದ 80 ಅಡಿ ಎತ್ತರದಲ್ಲಿರುವ ಪಿಲ್ಲರ್ ಮೇಲಿರುವ ಇಂಟರ್ ಲಿಂಕಿಂಗ್ ಕೇಬಲ್ ಬಾಕ್ಸ್ ಒಳಗಿನ ಸಂಬಂಧಿಸಿದ ಇಂಜಿನಿಯರ್ರವರೊಂದಿಗೆ ಹೋಗಿ ಅಂದು ಈ ಕಾಮಗಾರಿ ಜವಾಬ್ಧಾರಿ ಹೊತ್ತಿರುವ ಮತ್ತು ಕಾಮಗಾರಿಯನ್ನು ನಿರ್ಬಹಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ವಿಭಾಗದ ಜನರಲ್ ಮ್ಯಾನೇಜರ್ ಜೊತೆ ಮಾತುಕತೆ ನಡೆಸಿದ್ದೇನೆ. ಅಂದು ಅವರು ಸೂಚಿಸಿದಂತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಐಐಎಸ್ಸಿ ತಜ್ಞರ ಅಭಿಪ್ರಾಯ ಸಿಕ್ಕಕೂಡಲೇ ಮೇಲ್ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಆದ್ರೆ, ಕಾಮಗಾರಿ ಪೂರ್ಣಗೊಂಡು ಒಂದು ತಿಂಗಳಾದ್ರೂ ಸಂಚಾರಕ್ಕೆ ಅನುವು ಸಿಕ್ಕಿಲ್ಲ. ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ವಾಹನ ಸವಾರರು ಕಂಗಾಲಾಗಿದ್ದಾರೆ. ಹಾಗಾಗಿ ಸಾರ್ವಜನಿಕರ ಹಿತಾಸಕ್ತಿಯಿಂದ ಮೇಲ್ಸೇತುವೆ ಆದಷ್ಟು ಶೀಘ್ರದಲ್ಲಿ ಸಂಚಾರಕ್ಕೆ ಅನುಮತಿ ಕೋರಿ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ