ಬಿರು ಬೇಸಿಗೆಯ ನೀರಿನ‌ ಬವಣೆಗೆ ಹೆಲ್ಪ್ ಲೈನ್ ಆರಂಭಿಸಿದ ಬಿಬಿಎಂಪಿ

geetha

ಮಂಗಳವಾರ, 5 ಮಾರ್ಚ್ 2024 (14:00 IST)
ಬೆಂಗಳೂರು-ಬಿರು ಬೇಸಿಗೆಯ ನೀರಿನ‌ ಬವಣೆಗೆ ಬಿಬಿಎಂಪಿ ಹೆಲ್ಪ್ ಲೈನ್ ಆರಂಭಿಸಿದೆ.ಬೆಂಗಳೂರು ಹೊರವಲಯದ ಬಿಬಿಎಂಪಿ‌ ವ್ಯಾಪ್ತಿಯ 110 ಹಳ್ಳಿಗಳಿಗೆ ವಿಶೇಷ ಹೆಲ್ಪ್ ಲೈನ್ ವ್ಯವಸ್ಥೆ ಮಾಡಲಾಗಿದೆ.ನೀರಿನ ಹೆಚ್ಚಿನ ಸಮಸ್ಯೆ ಇರುವ 35 ವಾರ್ಡ್ ಗಳ 110 ಹಳ್ಳಿಗಳಿಗೆ ವಿಶೇಷ ಹೆಲ್ಪ್ ಲೈನ್ ಮಾಡಿದ್ದು,ಹೊರವಲಯದ 35 ವಾರ್ಡ್ ಗಳ ಪ್ರದೇಶಗಳಲ್ಲಿ ನೀರಿಗಾಗಿ 1533 ಗೆ ಕರೆ ಮಾಡಬೇಕು.

ಬೆಂಗಳೂರಿನ ಇತರ ವಾರ್ಡ್ ಗಳ ಜನರು ನೀರಿಗಾಗಿ 1916ಗೆ ಕರೆ ಮಾಡಬೇಕು.ಹೊರವಲಯದ 35 ವಾರ್ಡ್ ಗಳ ಮೇಲುಸ್ತುವಾರಿ ಜವಾಬ್ದಾರಿಯನ್ನು ಬಿಬಿಎಂಪಿ ಕಾರ್ಯಪಾಲಕ ಇಂಜಿನಿಯರ್ ಧರಣೇಂದ್ರಕುಮಾರ್ ನೇಮಿಸಲಾಗಿದೆ.ಎಲ್ಲಾ‌ 35 ವಾರ್ಡ್ ಗಳಿಗೆ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ.

ಹೊರವಲಯದ 35 ವಾರ್ಡ್ ಗಳ ದೊಡ್ಡಬಿದರಕಲ್ಲು, ಲಿಂಗಧೀರನಹಳ್ಳಿ, ಹೇರೋಹಳ್ಳಿ, ಉಲ್ಲಾಳ, ಹೆಮ್ಮಿಗೆಪುರ, ಉತ್ತರಹಳ್ಳಿ, ಸುಬ್ರಹ್ಮಣ್ಯಪುರ, ವಸಂತಪುರ, ಕೋಣನಕುಂಟೆ, ಅಂಜನಾಪುರ, ಬೇಗೂರು, ಗೊಟ್ಟಿಗೆರೆ, ಕಾಳೇನ ಅಗ್ರಹಾರ,ನಾಗನಾಥಪುರ, ಚೆಲ್ಕೆರೆ, ಕುಡ್ಲು, ಹೊರಮಾವು, ಕಲ್ಕೆರೆ, ಕಾಡುಗೋಡಿ, ಹೂಡಿ, ಭೈರತಿ, ಎಇಸಿಎಸ್ ಲೇಔಟ್, ವೈಟ್ ಫೀಲ್ಡ್, ವರ್ತೂರು, ಮುನ್ನೇಕೋಲಾಳ, ಮಾರತಹಳ್ಳಿ, ಬೆಳ್ಳಂದೂರು, ಕಮ್ಮಗೊಂಡನಹಳ್ಳಿ, ಚಿಕ್ಕಸಂದ್ರ, ಮಲ್ಲಸಂದ್ರ, ಕೆಂಪೇಗೌಡ,ಅಟ್ಟೂರು, ಕೋಗಿಲು, ಥಣಿಸಂದ್ರ ಹಾಗೂ ಅಮೃತಹಳ್ಳಿ‌ವಾರ್ಡ್ ಗಳನ್ಮು ಹೊರವಲಯದ ವಿಶೇಷ ಪಟ್ಟಿಗೆ ಸೇರ್ಪಡೆಯಾಗಿದೆ.

ವೆಬ್ದುನಿಯಾವನ್ನು ಓದಿ