ಈದ್ಗಾ ಮೈದಾನ ವಿವಾದ ಕಾನೂನು ಮೊರೆ ಹೋದ ಬಿಬಿಎಂಪಿ
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ವಿಚಾರದಲ್ಲಿ ಬಿಬಿಎಂಪಿ ನೋಟೀಸ್ ಗೆ ವಕ್ಫ್ ಬೋರ್ಡ್ ನಿಂದ ರಿಪ್ಲೈ ಹಿನ್ನೆಲೆ ಸಂಬಂದಪಟ್ಟಹಾಗೆ ವಿಶೇಷ ಆಯುಕ್ತರಾದ ರವೀಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬಿಬಿಎಂಪಿ ನ್ಯಾಯಾಂಗ ನಿಂದನೆ ಮಾಡಿದೆ ಎಂದು ವಕ್ಫ್ ಬೋರ್ಡ್ ಆರೋಪಿಸಿದೆ ಈಗ ಬಿಬಿಎಂಪಿ ಕಾನೂನು ಕೋಶಕ್ಕೆ ಪ್ರಕರಣದ ದಾಖಲೆ, ನ್ಯಾಯಾಲಯ ಆದೇಶದ ಬಗ್ಗೆ ವರದಿ ಕೇಳಿದ ಪಾಲಿಕೆ ಈಗ ಕಾನೂನು ತಜ್ಞರ ಮೊರೆ ಹೋಗಿದೆ. ಹೀಗಾಗಿ ಕಾನೂನು ಕೋಶಕ್ಕೆ ಪ್ರಕರಣ ಸಂಬಂಧ ಎಲ್ಲಾ ಮಾಹಿತಿ ಕಲೆಹಾಕಿ ವರದಿ ಕೊಡುವಂತೆ ಬಿಬಿಎಂಪಿ ಸೂಚಿಸಿದೆ ಎಂದು ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ರವೀಂದ್ರ ಹೇಳಿದ್ದಾರೆ.