ಜಟ್ಕಾ ಕಟ್, ಹಿಂದವೀ ಮಾಂಸದಂಗಡಿಗಳಿಗೆ ಬಿಬಿಎಂಪಿ ನೋಟಿಸ್!

ಮಂಗಳವಾರ, 19 ಏಪ್ರಿಲ್ 2022 (17:02 IST)

ಹಲಾಲ್ ಮಾಂಸದ ವಿರುದ್ಧ ದಿಢೀರನೆ ಆರಂಭವಾಗಿರುವ ಜಟ್ಕಾ ಕಟ್ ಮತ್ತು ಹಿಂದವೀ ಮಾಂಸದಂಗಡಿಗಳಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.

ಅನಧಿಕೃತವಾಗಿ ಆರಂಭಗೊಂಡ ಮಾಂಸದಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲವೇ ಅನುಮತಿ ಪಡೆದಿರಬೇಕು ಎಂದು ಬಿಬಿಎಂಪಿ ನೋಟಿಸ್ ನಲ್ಲಿ ತಿಳಿಸಿದೆ.

ಒಂದು ವಾರದ ಅವಧಿಯಲ್ಲಿ ಶುಲ್ಕ ಪಾವತಿಸಿ ಅನುಮತಿ ಪ್ರಮಾಣ ಪತ್ರ ಪಡೆಯಬೇಕು. ಇಲ್ಲದಿದ್ದರೆ ಅಂಗಡಿಗಳನ್ನು ಮುಚ್ಚಬೇಕು ಎಂದು ಬಿಬಿಎಂಪಿ ಪಶುಪಾಲನೆ ಸಹಾಯಕ ನಿರ್ದೇಶಕರು ನೋಟಿಸ್ ಬಗ್ಗೆ ವಿವರಿಸಿದ್ದಾರೆ.

ಕೋಳಿ ಮಾಂಸ ಮಾರಾಟಕ್ಕೆ 2500 ರೂ. ಶುಲ್ಕ ಪಾವತಿಸಿ ಅನುಮತಿ ಪಡೆಯಬೇಕು. ಒಂದು ವೇಳೆ ಕುರಿ ಮಾಂಸ ಮತ್ತು ಮೀನು ಮಾರಾಟ ಮಾಡಬೇಕಾದರೆ 10,500 ವಾರ್ಷಿಕ ಶುಲ್ಕ ಪಾವತಿಸಬೇಕು ಎಂಬ ನಿಯಮ ಇದೆ.

ನಾವು ಎಲ್ಲಾ ನಿಯಮಗಳನ್ನು ಪಾಲಿಸುತ್ತೇವೆ. ಶುಲ್ಕ ಪಾವತಿಸಿ ಅನುಮತಿ ಪಡೆಯುತ್ತೇವೆ ಎಂದು ಹಿಂದವೀ ಮಾರ್ಟ್ ಮಾಲೀಕ ಮುನೇಗೌಡ ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ