ಬೆಂಗಳೂರಿಗೆ ಬರಲಿದ್ದಾರೆ ಕೇಜ್ರೀವಾಲ್!

ಮಂಗಳವಾರ, 19 ಏಪ್ರಿಲ್ 2022 (09:44 IST)
ಬೆಂಗಳೂರು : ದೆಹಲಿಯಲ್ಲಿ ಕಳೆದ 7 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಅರವಿಂದ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪಂಜಾಬ್ ಗೆಲುವಿನ ಬಳಿಕ ಮತ್ತಷ್ಟು ಬಲಶಾಲಿಯಾಗಿದೆ.
 
ಇದೀಗ ತನ್ನ ಪಕ್ಷವನ್ನು ಇತರ ರಾಜ್ಯಗಳಿಗೂ ವಿಸ್ತರಿಸಲು ನಿರ್ಧರಿಸಿರುವ ಆಪ್ ಗುಜರಾತ್ ಹಾಗೂ ಕರ್ನಾಟಕ ಗೆಲ್ಲುವ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಚುನಾವಣೆಗೆ ಒಂದು ವರ್ಷಕ್ಕೂ ಮೊದಲೇ ಸಿದ್ಧತೆ ಆರಂಭಿಸಿದೆ.

ಆಪ್ ಸಿದ್ಧತೆಗೆ ಮಾಜಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೇರ್ಪಡೆ ಮತ್ತಷ್ಟು ಬಲ ತುಂಬಿದೆ.

ಇನ್ನು ಆಮ್ ಆದ್ಮಿ ಪಾರ್ಟಿ ಇಂದು, ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಿದೆ. ಪಕ್ಷದ ಮುಖಂಡರಾದ ಭಾಸ್ಕರ್ ರಾವ್, ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಸೇರಿದಂತೆ ಹಲವು ನಾಯಕರು ಇದರಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಹೊಸ ಜನಪರ ರಾಜಕೀಯ ಶುರುಮಾಡಲು ಕರೆ ಕೊಟ್ಟ ಪಕ್ಷದ ಅಧ್ಯಕ್ಷ ಪೃಥ್ವಿ ರೆಡ್ಡಿ ಇದೇ 21 ರಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕಳೆದ 7 ವರ್ಷಗಳಿಂದ ದೆಹಲಿಯಲ್ಲಿ ಉತ್ತಮ ಆಡಳಿತವನ್ನ ಅರವಿಂದ್ ಕೇಜ್ರಿವಾಲ್ ಕೊಟ್ಟಿದ್ದಾರೆ.

ಇಡೀ ದೇಶದ ಜನ ಪಂಜಾಬ್ ಹಾಗೂ ದೆಹಲಿಯತ್ತ ನೋಡುತ್ತಿದ್ದಾರೆ. ಇದೀಗ ನಮ್ಮ ರಾಜ್ಯ ಕೂಡ ಅದನ್ನೇ ನೋಡುತ್ತಿದ್ದೇವೆ ಎಂದಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಮುಖಂಡ ಭಾಸ್ಕರ್ ರಾವ್ ನಾನು ಕಳೆದ ಐದಾರು ದಿನಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ.

ಯಾವುದೇ ಹಗರಣದ ವಾಸನೇ ಬಾರದ ರೀತಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ನಡೆಸಿದ್ದಾರೆ. ಹೀಗಾಗಿ ಸಮಾವೇಶದಲ್ಲಿ ಎಲ್ಲರು ಭಾಗವಹಿಸಿ. ಈ ಸಂದರ್ಭದಲ್ಲಿ 82 ಸಾರ್ವಜನಿಕರು ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ