ಬಿಬಿಎಂಪಿಯ ಬೃಹತ್ ನೀರುಗಾಲುವೆ ಇಲಾಖೆಯಲ್ಲಿ 62 ಕೋಟಿ ರೂಪಾಯಿ ಬೃಹತ್ ಹಗರಣ ನಡೆದಿದೆ ಅಂತ ದಾಖಲೆ ಸಮೇತ ಬಿಜೆಪಿ ವಕ್ತರ ಎನ್ ಆರ್ ರಮೇಶ್ ಆರೋಪ ಮಾಡಿದರೆ, ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ, ಬ್ಯಾಟರಾಯನಪುರ ವಲಯಗಳಲ್ಲಿ ಕಾಮಗಾರಿ ನಡೆಸದೆ ಸುಮಾರು 62 ಕೋಟಿ ಹಣ ಗುತ್ತಿಗೆದಾರರಿಗೆ ಪಾವತಿಸಿದರೆ ಅಂತ ನೇರ ಅರೋಪ ಮಾಡಿದರೆ , ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳ ಮರು ನಿರ್ಮಾಣ, ಪ್ರವಾಹ ನಿರ್ವಹಣೆ ಮತ್ತು ಕೊಳಚೆ ನೀರು ಮಾರ್ಗ ಬದಲಾವಣೆ”ಎಂಬ ಹೆಸರಿನಲ್ಲಿ ಈ 15 ಪ್ಯಾಕೇಜ್ ಗಳ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು.ಅದ್ರೆ ಮಹಾ ಲೆಕ್ಕಪಾಲರು ಸದರಿ “ವರದಿ”ಯಲ್ಲಿ ರಾಜಕಾಲುವೆ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ನಡೆದಿರುವ “ಮಹಾ ವಂಚನೆ” ಯನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.ಸದರಿ ವರದಿಯಲ್ಲಿರುವ ಅಂಶಗಳ ಪ್ರಕಾರ - ರಾಜರಾಜೇಶ್ವರಿ ನಗರ , ಬೊಮ್ಮನಹಳ್ಳಿ , ಬ್ಯಾಟರಾಯನಪುರ ವಲಯಗಳ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸದೆ 62.ಕೋಟಿ ಹಣವನ್ನೂ ಇಬ್ಬರು ಗುತ್ತಿಗೆದಾರರಿಗೆ ಬಿಡುಗಡೆಯಾಗಿದೆ, ಅಂತ ವರದಿಯಲ್ಲಿ ಉಲ್ಲೇಘಿಸಲಾಗಿದೆ, ಈ ಮಹಾ ವಂಚನೆಯ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ, ACB ಮತ್ತು BMTF ನಲ್ಲಿ ದೂರು ದಾಖಲಿಸಿ, ಸಂಬಂಧಿಸಿದ ಎಲ್ಲ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಭ್ರಷ್ಟಾಚಾರ , ವಂಚನೆ , ಅಧಿಕಾರ ದುರುಪಯೋಗ ಮತ್ತು ನಕಲಿ ದಾಖಲೆ ತಯಾರಿಕೆ ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತೆ ಮಾನವಿ ಮಾಡಿದರೆ