ಪಿಓಪಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶವಿಲ್ಲ ಎಂದ ಬಿಬಿಎಂಪಿ

ಸೋಮವಾರ, 2 ಸೆಪ್ಟಂಬರ್ 2019 (11:00 IST)
ಬೆಂಗಳೂರು : ರಾಜ್ಯದೆಲ್ಲೆಡೆ ಜನರು ಗೌರಿ- ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಮನೆಮನೆಯಲ್ಲೂ ಗಣೇಶನ ವಿಗ್ರಹವಿಟ್ಟು ಪೂಜೆ  ನಡೆಸಲಾಗುತ್ತಿದೆ.




ಗಣೇಶ ಮೂರ್ತಿ ವಿಸರ್ಜನೆಗಾಗಿ ಬಿಬಿಎಂಪಿ ವತಿಯಿಂದ ನಗರದ ಸ್ಯಾಂಕಿ ಕೆರೆ, ಹಲಸೂರು ಕೆರೆ ಮತ್ತು ಯಡಿಯೂರು ಕೆರೆ ಸೇರಿದಂತೆ ಹಲವೆಡೆ ವ್ಯವಸ್ಥೆ ಮಾಡಲಾಗಿದೆ. 1 ಲಕ್ಷ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶವಿದ್ದು, ದೊಡ್ಡ ಗಣಪತಿ ವಿಸರ್ಜನೆಗೆ ಕ್ರೇನ್ ಬಳಸಲು ಸೂಚಿಸಲಾಗಿದೆ.


ಆದರೆ ಪಿಓಪಿ(ಪ್ಲಾಸ್ಟರ್ ಆಫ್ ಪ್ಯಾರೀಸ್) ಗಣೇಶ ಮೂರ್ತಿಯ ವಿಸರ್ಜನೆಗೆ ಅವಕಾಶವಿಲ್ಲ ಎಂದು ಬಿಬಿಎಂಪಿ ತಿಳಿಸಿದೆ. ಎಲ್ಲಾ ಕಡೆ ಸಿಸಿಟಿವಿ ಅಳವಡಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ