ಬಿಬಿಎಂಪಿ ಸೈಟು ಕೊಡಿಸುವ ಆಮಿಷ-ಉಂಡೆನಾಮ ಹಾಕುತ್ತಿದ್ದ ವಂಚಕರ ಸೆರೆ

geetha

ಮಂಗಳವಾರ, 6 ಫೆಬ್ರವರಿ 2024 (14:22 IST)
ಬೆಂಗಳೂರು : ಕಂಪ್ಯೂಟರ್‌ ಆಪರೇಟರ್‌ ಕೆಲಸ ಕೊಡಿಸುವ ಆಮಿಷ, ವಿಧೆಯವರಿಗೆ ಮಾಸಾಶನ ಕೊಡಿಸುವ ಆಮಿಷ ಸೇರಿದಂತೆ ಹಲವು ರೀತಿಗಳಲ್ಲಿ ಇವರು ವಂಚನೆ ನಡೆಸುತ್ತಿದ್ದರು ಬಿಬಿಎಂಪಿಯಿಂದ ಕಡಿಮೆ ದರದಲ್ಲಿ ಸೈಟು, ಕಾರು ಕೊಳ್ಳಲು ಸಾಲು ಹಾಗೂ ಕಂಪ್ಯೂಟರ್‌ ಆಪರೇಟರ್‌ ಕೆಲಸ ಕೊಡಿಸುವುದಾಗ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ಯುಕವರನ್ನು ಪೊಲೀಸರು ಬಂಧಿಸಿದ್ದಾರೆ. ದೀಪಕ್‌ (22) ಹಾಗೂ ಹರೀಷ್‌ (21) ಬಂಧಿತ ಆರೋಪಿಗಳು.

ಸುಮಾರು 60 ಜನರಿಗೆ ಇವರು ವಂಚನೆ ನಡೆಸಿದ್ದಾರೆ. ಈ ಬಗ್ಗೆ ಉತ್ತರ ವಿಭಾಗ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಂದು ಪೊಲೀಸ್‌ ಆಯುಕ್ತ ದಯಾನಂದ್‌ ಮಾಹಿತಿ ನೀಡಿದ್ದಾರೆ. ಆರೋಪಿಗಳ ಬ್ಯಾಂಕ್‌ ಖಾತೆಯನ್ನು ಮಟ್ಟುಗೋಲು ಹಾಕಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ