ಕನ್ನಡಿಗರಿಗೆಲ್ಲ ‘ಕನ್ನಡ ಕಾರ್ಡ್’ ಕೊಡಿ-ನಟಿ ಪೂಜಾ ಗಾಂಧಿ
2011ರ ಜನಗಣತಿಯ ಆಧಾರದ ಮೇಲೆ ಕೆಲವು ಅಂದಾಜುಗಳ ಪ್ರಕಾರ 2023ರಲ್ಲಿ ಕರ್ನಾಟಕ 7 ಕೋಟಿ ಜನ ಸಂಖ್ಯೆಯನ್ನು ಹೊಂದಿದೆ. ಅದರಲ್ಲಿ ಶೇ66ರಷ್ಟು ಕನ್ನಡಿಗರಿದ್ದು, ಶೇ.34ರಷ್ಟು ಅನ್ಯಭಾಷಿಕರಿದ್ದಾರೆಂದು ಅಂದಾಜಿಸಲಾಗಿದೆ.ಹಾಗಾಗಿ ಅಮೆರಿಕದ ಗ್ರೀನ್ ಕಾರ್ಡ್ ರೀತಿ ಕನ್ನಡಿಗರಿಗೆಲ್ಲ ಕನ್ನಡ ಕಾರ್ಡ್ ಕೊಡಿ ಅಂತಾ ನಟಿ ಪೂಜಾ ಗಾಂಧಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.