ಗಣೇಶ ಮೂರ್ತಿ ವಿಸರ್ಜೆನೆಗೆ ಬಿಬಿಎಂಪಿಯ ಈ ನಿಯಮಗಳನ್ನ ಪಾಲಿಸಲೇಬೇಕು

ಶುಕ್ರವಾರ, 25 ಆಗಸ್ಟ್ 2017 (12:32 IST)
ದೇಶಾದ್ಯಂತ ಗಣೇಶ ಚತುರ್ಥಿಯನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲೂ ಹಬ್ಬ ಕಳೆಕಟ್ಟಿದೆ.ಪರಿಸರ ಕಾಳಜಿ ದೃಷ್ಟಿಯಿಂದ ಈ ಬಾರಿ ಬಿಬಿಎಂಪಿ ಗಣೇಶ ವಿಸರ್ಜನೆಗೆ ಕೆಲ ನಿಯಮಗಳನ್ನ ರೂಪಿಸಿದೆ.
ಪಿಓಪಿ ಗಣೇಶ ಬಳಸಬಾರದು, ಪರಸಿರ ಸ್ನೇಹಿ ಮಣ್ಣಿ ಗಣಪನನ್ನ ಪೂಜೆಗೆ ಬಳಸಬೇಕು.


1. ಬ್ಯಾನರ್, ಧ್ವನಿವರ್ಧಕ, ಪಟಾಕಿಗಳ ಬಳಕೆ ಸಂಪೂರ್ಣ ನಿಷೇಧ

2. ನಿಗದಿತ ಪ್ರದೇಶಗಳಲ್ಲಿ ಮಾತ್ರ ಗಣೇಶ ಮೂರ್ತಿ ವಿಂಗಡಿಸಬೇಕು

3. ಗಣೇಶ ವಿಸರ್ಜನೆ ವೇಳೆ ಕಸ ವಿಂಗಡಣೆ ಮಾಡಬೇಕು.

4. ಸ್ಯಾಂಕಿ, ಸಾರಕ್ಕಿ ಕೆರೆ, ಹೆಬ್ಬಾಳ, ಹಲಸೂರು ಕೆರೆ ಸೇರಿ ನಗರದ 36 ಕಡೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

5.ಬಿಬಿಎಂಪಿ ಕಡೆಯಿಂದ 250 ಮೊಬೈಲ್ ಟ್ಯಾಂಕರ್ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂ 40 ಮೊಬೈಲ್ ಟ್ಯಾಂಕರ್`ಗಳ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ