ಕಂದಾಯ ಅಧಿಕಾರಿಗಳ ಮೇಲೆ ದಂಡಂ ದಶಗುಣಂ ಅಸ್ತ್ರ ಪ್ರಯೋಗಕ್ಕೆ ಮುಂದಾದ ಬಿಬಿಎಂಪಿ

ಮಂಗಳವಾರ, 18 ಜುಲೈ 2023 (20:44 IST)
ಕಂದಾಯ ವಸೂಲಿಯಲ್ಲಿ ಹಿಂದೆ ಬಿದ್ದಿರುವ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಪಾಲಿಕೆ ಕೊಟ್ಟಿದೆ.ಕಳೆದ ಬಾರಿ ಕಂದಾಯ ವಸೂಲಾತಿಯಲ್ಲಿ ಕಳಪೆ ಪ್ರದರ್ಶನ ಬಿಬಿಎಂಪಿ ತೋರಿಸುತ್ತಿತ್ತು.ಹೀಗಾಗಿ ಈ ಸಾಲಿನಲ್ಲಿ ಆರ್ಥಿಕ ಸಮಸ್ಯೆ ಪಾಲಿಕೆ ಎದುರಿಸುತ್ತಿದೆ.ಈ ಹಿನ್ನಲೆ ಕಂದಾಯ ಅಧಿಕಾರಿಗಳಿಗೆ ಖಡಕ್ ಸೂಚನೆ  ಬಿಬಿಎಂಪಿ ಚೀಫ್ ಕಮಿಷನರ್ ಕೊಟ್ಟಿದ್ದಾರೆ.
 
ಕೊಟ್ಟಿರುವ ಟಾರ್ಗೆಟ್ ಕಂದಾಯ ವಸೂಲಿ ಮಾಡದೇ ಇದ್ದರೆ ವರ್ಗ ಮಾಡುವ ಎಚ್ಚರಿಕೆ ಇದೆ.ಪಾಲಿಕೆ ಹಿರಿಯ, ಕಿರಿಯ, ಸಹಾಯ ಕಂದಾಯ ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದು,ನಾನ್ ಎಕ್ಸಿಕ್ಯೂಟಿವ್ ಹುದ್ದೆ ಅಥವಾ ವಲಯಾಂತರ ವರ್ಗಾವಣೆ ಮಾಡುವ ಎಚ್ಚರಿಕೆ ನೀಡಿದ್ದಾರೆ.2022-23ನೇ ಸಾಲಿನಲ್ಲಿ ವಸೂಲಿಯಾದ ಕಂದಾಯದ 50% ಹೆಚ್ಚುವರಿ ಗುರಿ  ಚೀಫ್ ಕಮಿಷನರ್ ನೀಡಿದ್ದಾರೆ.ಒಂದು ವೇಳೆ ಗುರಿಮುಟ್ಟದಿದ್ದರೆ ಎತ್ತಂಗಡಿ ಸಂದೇಶ  ಬಿಬಿಎಂಪಿ ಚೀಫ್ ಕಮಿಷನರ್ ರವಾನಿಸಿದ್ದಾರೆ.
 
 
 
• 2022-23ನೇ ಸಾಲಿನಲ್ಲಿ 3,300 ಕೋಟಿ ಕಂದಾಯ ಸಂಗ್ರಹ
• 2023-24ನೇ ಸಾಲಿನಲ್ಲಿ ಕಳೆದ ಬಾರಿಗಿಂತ 50% ಹೆಚ್ಚಳದ ಟಾರ್ಗೆಟ್
• ಈ ಬಾರಿ 4,567 ಕೋಟಿ ಕಂದಾಯ ಸಂಗ್ರಹದ ಗುರಿ ನಿಗದಿ
• ಇನ್ನೂ ಎಂಟು ತಿಂಗಳ ಒಳಗಾಗಿ ಕಂದಾಯ ಸಂಗ್ರಹದ ಗುರಿ ತಲುಪಲು ಸೂಚನೆ
• ಇಲ್ಲದಿದ್ದರೆ ವರ್ಗಾವಣೆ ಮಾಡಿ ಆದೇಶ ಮಾಡಲಿರುವ ಬಿಬಿಎಂಪಿ ಚೀಫ್ ಕಮಿಷನರ್
• ವಲಯಾಂತರ ಅಥವಾ ನಾನ್ ಎಕ್ಸಿಕ್ಯೂಟಿವ್ ಹುದ್ದಗೆ ವರ್ಗಾವಣೆ
• ಬಿಬಿಎಂಪಿಯ ಎಲ್ಲಾ ಸಹಾಯಕ, ಹಿರಿಯ, ಕಿರಿಯ ಕಂದಾಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ