ಮೇಯರ್ ಪದ್ಮಾವತಿಗೆ ಮುಜುಗರ ತಂದ ಪೌರ ಕಾರ್ಮಿಕರು

ಮಂಗಳವಾರ, 13 ಜೂನ್ 2017 (11:03 IST)
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಸದ ಸಮಸ್ಯೆ ಮತ್ತೆ ಶುರುವಾಗಿದೆ. ಇದಕ್ಕೆಲ್ಲಾ ಕಾರಣ ಪೌರ ಕಾರ್ಮಿಕರ ಪ್ರತಿಭಟನೆ. ಆದರೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಪದ್ಮಾವತಿಗೆ ಪ್ರತಿಭಟನಾಕಾರರು ಮುಜುಗರವುಂಟು ಮಾಡಿದ್ದಾರೆ.

 
ಗುತ್ತಿಗೆದಾರರನ್ನು ರದ್ದು ಪಡಿಸಿ, ಬಿಬಿಎಂಪಿಯಿಂದ ನೇರ ವೇತನ ನೀಡುವ ಪದ್ಧತಿ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಲು ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಪದ್ಮಾವತಿ ಪ್ರತಿಭಟನೆ ಸ್ಥಗಿತಗೊಳಿಸುವಂತೆ ಮನವಿ ಮಾಡಿದರು. ನಾನು ಸಮಸ್ಯೆ ಬಗೆ ಹರಿಸಲು ಪ್ರಯತ್ನ ನಡೆಸುತ್ತೇನೆ. ನನ್ನ ಮೇಲೆ ನಂಬಿಕೆ ಇಲ್ವಾ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಭಟನಾಕಾರರು ಒಕ್ಕೊರಲಿನಿಂದ ನಂಬಿಕೆ ಇಲ್ಲ ಎಂದು ಮೇಯರ್ ಗೆ ಮುಜುಗರವುಂಟು ಮಾಡಿದ್ದಾರೆ. ಇದೇ ವೇಳೆ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈ ಬಿಡಲ್ಲ ಎಂದು ಕಾರ್ಮಿಕ ಸಂಘಟನೆಯ ಮುಖ್ಯಸ್ಥ ನಾರಾಯಣ್ ಪಟ್ಟು ಹಿಡಿದಿದ್ದಾರೆ. ಪ್ರತಿಭಟನೆಯಿಂದಾಗಿ ಬೆಂಗಳೂರಿನಾದ್ಯಂತ ಕಸ ವಿಲೇವಾರಿಯಾಗದೇ ಕೊಳೆತ ವಾಸನೆ ಬರುತ್ತಿದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ