ಬಿ. ಡಿ. ಎ. ಅಧಿಕಾರಿಗಳಿಗೆ ನಡುಕ ಶುರು

ಸೋಮವಾರ, 6 ಡಿಸೆಂಬರ್ 2021 (16:05 IST)
ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಕಚೇರಿಯಲ್ಲಿ ಸುಮಾರು 10 ವರ್ಷಗಳಿಂದ ನಡೆದಿರುವ ಹಗರಣಗಳ ಕುರಿತು ಸಿಸಿಬಿ ಪೊಲೀಸರು ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದು, ಹಿರಿಯ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಬಿಡಿಎ ಭೂಸ್ವಾೀಧಿನ ಪರಿಹಾರ ಪಾವತಿ ವೇಳೆ ಸುಳ್ಳು ಮಾಹಿತಿ ನೀಡಿ ಪರಿಹಾರವನ್ನು ಕಬಳಿಸಿರುವುದು ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿ, ಭಾರತ್ ಎಚ್‍ಬಿಸಿಎಸ್ ಲೇಔಟ್‍ನ ನಾಗರಿಕ ನಿವೇಶನಗಳನ್ನು ಷರತ್ತು ಉಲ್ಲಂಘಿಸಿ ಹಂಚಿಕೆ ಮಾಡಿದ್ದು, ಎಚ್‍ಎಸ್‍ಆರ್ ಲೇಔಟ್ 3ನೇ ಸೆಕ್ಟರ್‍ನಲ್ಲಿ ಅನುಮೋದಿತ ನಕ್ಷೆ ರೀತ್ಯ ಕಟ್ಟಡ ನಿರ್ಮಿಸದೆ ನಿಯಮ ಉಲ್ಲಂಘಿಸಿದರೂ ಕ್ರಮ ಕೈಗೊಳ್ಳದೆ ಇರುವುದನ್ನು ಪತ್ತೆಹಚ್ಚಲಾಗಿತ್ತು.
 
ಕಡತಗಳ ಪರಿಶೀಲನೆಯಿಂದ ನಿವೇಶನದಾರರಿಗೆ ಹಂಚಿಕೆಯಾದ ಸ್ಥ¼ ಹೊರತುಪಡಿಸಿ ಬೇರೆ ಕಡೆ ಜಾಗ ನೀಡಿರುವುದು, ಹಳೆಯ ಬಡಾವಣೆಗಳಲ್ಲಿ ನಿವೇಶನಗಳನ್ನು ಯಾರಿಗೂ ಹಂಚಿಕೆ ಮಾಡದೆ ಖಾಲಿಬಿಟ್ಟು ಖಾಸಗಿ ವ್ಯಕ್ತಿಗಳು ಶೆಡ್ ನಿರ್ಮಿಸಲು ಅವಕಾಶ ನೀಡಿರುವುದು, ನಕಲಿ ದಾಖಲೆಗಳ ಮೂಲಕ ನಿವೇಶನಗಳ ಪರಭಾರೆ, ಕೆಂಪೇಗೌಡ ಬಡಾವಣೆಯಲ್ಲಿ ನೈಜ ಭೂ ಮಾಲೀಕರಿಗೆ ಪರಿಹಾರ ನೀಡದೇ ಮೂರನೇ ವ್ಯಕ್ತಿಗೆ ಹಣ ನೀಡಿರುವುದು ಸೇರಿದಂತೆ ಹಲವಾರು ಆರೋಪಗಳನ್ನು ದಾಳಿಯ ವೇಳೆ ಪತ್ತೆಹಚ್ಚಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ