ನಿಮ್ಮ ಮಕ್ಕಳಿಗೆ ವಾಹನ ಕೊಡುವ ಮೊದಲು ಎಚ್ಚರ. ಕಂಬಿ ಎಣಿಸಬೇಕಾದಿತು...!

ಗುರುಮೂರ್ತಿ

ಗುರುವಾರ, 1 ಮಾರ್ಚ್ 2018 (18:17 IST)
ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೀರಾ...! ಸ್ವಲ್ಪ ನಿಮ್ಮ ಮಕ್ಕಳ ಕುರಿತು ಸ್ವಲ್ಪ ಕಾಳಜಿ ವಹಿಸಿ ಇಲ್ಲವಾದಲ್ಲಿ ನೀವು ಸಹ ಕಂಬಿ ಎಣಿಸಬೇಕಾಗಬಹುದು ಏಕೆ ಅಂತೀರಾ ಇಲ್ಲಿದೆ ವರದಿ.
ಇತ್ತೀಚಿಗೆ ಬೆಂಗಳೂರಿನಲ್ಲಿ ಹೆಚ್ಚಾಗಿ ರಸ್ತೆ ಅಪಘಾತಗಳು ಹೆಚ್ಚಾಗಿ ನಡೆಯುತ್ತಿದ್ದು ಇದನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಸಫಲರಾಗುತ್ತಿಲ್ಲ. ಹೀಗಾಗಿಯೇ ಇದನ್ನು ನಿಯಂತ್ರಿಸಲು ಟ್ರಾಫಿಕ್ ಪೋಲಿಸರು ಹೊಸದೊಂದು ಪ್ಲಾನ್ ಒಂದನ್ನು ಮಾಡಿದ್ದಾರೆ. ಅದೇನೆಂದರೆ ನಿಮ್ಮ ಮಕ್ಕಳು ಅಪ್ರಾಪ್ತ ಹಾಗೂ ವಾಹನ ಚಾಲನಾ ಪರವಾನಗಿ ಹೊಂದಿಲ್ಲವಾದಲ್ಲಿ ಅಥವಾ ನಿಮ್ಮ ಮಕ್ಕಳು ಅಪಾಯಕಾರಿಯಾಗಿ ಡ್ರಾಗ್ ರೇಸ್ ಹಾಗೂ ಬೈಕ್ ಸ್ಟಂಟ್ ಮಾಡುತ್ತಿರುವುದು ಕಂಡುಬಂದಲ್ಲಿ, ಇಲ್ಲವೇ ಆ ಕುರಿತು ವೀಡಿಯೊಗಳು ಲಭ್ಯವಾದರೂ ಸಹ ನಿಮ್ಮ ಮಕ್ಕಳೊಂದಿಗೆ ನಿಮ್ಮನ್ನು ಪೊಲೀಸರು ಬಂಧಿಸುವ ಸಾಧ್ಯತೆಗಳಿವೆ.
 
ಹೌದು ಪ್ರಸ್ತುತವಾಗಿ ಮಕ್ಕಳು ಇಲ್ಲವೇ ಹದಿಹರೆಯದವರು ತಮ್ಮ ಬೈಕ್ ಸ್ಟಂಟ್ ವೀಡಿಯೊಗಳನ್ನು ತಯಾರಿಸಿ ವಾಟ್ಸೆಪ್ ಫೇಸ್‌ಬುಕ್‌ಗಳಲ್ಲಿ ಶೇರ್ ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಈ ಸ್ಟಂಟ್‌ಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಟ್ರಾಫಿಕ್ ವಿಭಾಗದ ಪೊಲೀಸರು ಈ ಯೋಜನೆ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಇತ್ತೀಚಿಗೆ ಸಂಜೆ ಆಗುತ್ತಿದ್ದಂತೆ ಎಲ್ಲಾ ಹದಿಹರೆಯದ ಹುಡುಗರು ಡ್ರಾಗ್ ರೇಸ್, ಬೈಕ್ ಸ್ಟಂಟ್ ಮಾಡುತ್ತಿರುವುದರಿಂದ ಹಲವಾರು ಅಪಘಾತಗಳು ಸಂಭವಿಸುತ್ತಿದ್ದು ಇದರಿಂದ ರಸ್ತೆ ನಿಯಮವನ್ನು ಗಾಳಿಗೆ ತುರಲಾಗುತ್ತಿದೆ. ಅದು ಕೇವಲ ಮಕ್ಕಳ ತಪ್ಪಲ್ಲ ಅವರ ಪೋಷಕರ ಪಾತ್ರವು ಇದರಲ್ಲಿದೆ ಹಾಗಾಗಿ ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
 
ಈ ಹಿನ್ನಲೆಯಲ್ಲಿ ನಿನ್ನೆ 5 ಜನ ಹುಡುಗರು ಮತ್ತು ಅವರ ಪೋಷಕರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು ಆ 5 ಜನ ಹುಡುಗರು ಅಪ್ರಾಪ್ತ ವಯಸ್ಸಿನವರಾಗಿರುವುದು ಮಾತ್ರವಲ್ಲ ಅವರ ಬಳಿ ಯಾವುದೇ ಚಾಲನಾ ಪರವಾನಗಿಯು ಇಲ್ಲದಿರುವುದು ವಿಪರ್ಯಾಸವೆಂದೇ ಹೇಳಬಹುದು. ಹಾಗಾಗಿ ಅವರನ್ನು ಬಂಧಿಸಿ ಅವರ ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅವರು ಬೇಲ್ ಪಡೆದು ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಅವರ ಸ್ಟಂಟ್ ಕುರಿತ ವೀಡಿಯೊಗಳು ಪೊಲೀಸರ ಬಳಿ ಇದ್ದು ಇದನ್ನು ಆಧಾರವಾಗಿಟ್ಟುಕೊಂಡು ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.
 
ಈ ಮೂಲಕ ಬೆಂಗಳೂರು ಟ್ರಾಫಿಕ್ ಪೊಲೀಸರು ಇಂತಹ ಬೈಕ್ ಸ್ಟಂಟ್ ಮಾಡುವವರಿಗೆ ಮತ್ತು ಲೈಸನ್ಸ್‌ ಇಲ್ಲದೇ ಪ್ರಯಾಣಿಸುವವರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದು, ನಿಮ್ಮ ಮಕ್ಕಳು ಈ ತರಹದ ಬೈಕ್ ರೇಸ್, ಡ್ರ್ಯಾಗ್ ರೇಸ್, ಸ್ಟಂಟ್ ಮಾಡುವುದು ನಿಮ್ಮ ಗಮನಕ್ಕೆ ಬಂದಲ್ಲಿ ಕೂಡಲೇ ಮಕ್ಕಳಿಗೆ ಎಚ್ಚರಿಸಿ, ಬೈಕ್ ಹಾಗೂ ಕಾರ್‌ಗಳನ್ನು ಕೊಡದಿರುವುದೇ ಉತ್ತಮ ಇಲ್ಲವಾದಲ್ಲಿ ನಿಮ್ಮ ಮಕ್ಕಳೊಂದಿಗೆ ನೀವು ಕಂಬಿ ಎಣಿಸಬೇಕಾದಿತು ಎಚ್ಚರ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ