ಡೇಟಿಂಗ್ ಆ್ಯಪ್ ಬಳಸುವ ಮುನ್ನ ಎಚ್ಚರ!

ಮಂಗಳವಾರ, 29 ಆಗಸ್ಟ್ 2023 (17:21 IST)
ಜೀವನ ಸಂಗಾತಿಯನ್ನು ಹುಡುಕಲು ಡೇಟಿಂಗ್ ಆ್ಯಪ್​ಗಳನ್ನು ಬಳಸುವುದರಲ್ಲಿ ಬೆಂಗಳೂರು ಮುಂದಿದೆ. ಆದರೆ, ಈಗ ಡೇಟಿಂಗ್ ಆ್ಯಪ್​ಗಳನ್ನು ಬಳಸುವವರು ಬಹಳ ಎಚ್ಚರಿಕೆ ವಹಿಸಬೇಕು. ಏಕೆಂದರೆ ತಮ್ಮ ಬಾಳ ಸಂಗಾತಿಯನ್ನು ಹುಡುಕಲು ಡೇಟಿಂಗ್ ಆ್ಯಪ್ ಮೊರೆ ಹೋಗುವ ಯುವಕರಿಗೆ ಮೋಸ ಆಗುತ್ತಿದೆ. ಆನ್​ಲೈನ್ ಡೇಟಿಂಗ್ ಆ್ಯಪ್ ಮೂಲಕ ಸುಲಿಗೆ ಮಾಡ್ತಿದ್ದ ಇಬ್ಬರು ಆರೋಪಿಗಳನ್ನು ಹೆಚ್​ಎಸ್​ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ನದೀಂ ಪಾಷ ಹಾಗೂ ನಾಗೇಶ್ ಬಂಧಿತ ಆರೋಪಿಗಳು. ಲೊಕ್ಯಾಂಟೋ ಆ್ಯಪ್ ಮೂಲಕ ಹುಡುಗಿ ಹೆಸರಲ್ಲಿ ಕಾಲ್ ಮಾಡಿ ಡೇಟಿಂಗ್ ನೆಪದಲ್ಲಿ ಕರೆಸಿ ಸುಮಾರು 15ಕ್ಕೂ ಅಧಿಕ ಜನರಿಗೆ ಹುಡುಗಿ ಹೆಸರಲ್ಲಿ ಮೆಸೇಜ್ ಮಾಡಿ ವ್ಯಕ್ತಿಯೊಬ್ಬನ್ನು ಕರೆಸಿ 60 ಸಾವಿರ ಹಣ ಸುಲಿಗೆ ಮಾಡಿದ್ದರು. ಹಣ ದೋಚುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ