ಡೇಟಿಂಗ್ ಆ್ಯಪ್ ಯೂಸ್ ಮಾಡ್ತಿರೋ ಯುವತಿಯರೇ ಎಚ್ಚರ ಎಚ್ಚರ..!

ಶನಿವಾರ, 10 ಜೂನ್ 2023 (18:42 IST)
ಡೇಟಿಂಗ್ ಆ್ಯಪ್ ನಲ್ಲಿ ಫೇಕ್ ಹೆಸರಲ್ಲಿ ಯುವತಿಯೊಬ್ಬಳಿಗೆ ಮೋಸ ಮಾಡಿರುವ ಘಟನೆ ನಡೆದಿದೆ. ಕಾಮುಕರು  ಡೇಟಿಂಗ್ ಆ್ಯಪ್ ಗಳ ಬಳಕೆ ಮಾಡ್ಕೊಂಡು ಹುಡುಗಿರನ್ನ ಈಜಿ ಯಾಗಿ ಬಲೆಗೆ ಬೀಳಿಸಿಕೊಳ್ತಿದ್ದಾರೆ. ತಮ್ಮ ಫ್ರೋಫೈಲ್ ನಲ್ಲಿ ಹೀರೋ ರೀತಿ ಪೋಟೊ ಅಪ್ಲೋಡ್ ಮಾಡಿ, ಡೇಟಿಂಗ್ ಆ್ಯಪ್ ನಲ್ಲಿ ಮುದ್ದಾದ ಹುಡುಗಿಯರ ಸ್ನೇಹ ಬೆಳೆಸಿ ಮದುವೆ ನಾಟಕವಾಡೋದು. ಹೌದು,,ಬಂಬಲ್ ಆ್ಯಪ್ ನಲ್ಲಿ ಯುವತಿಯೊಬ್ಬಳು ಸಂಗಾತಿಯನ್ನ ಹುಡುಕುತ್ತಿದ್ದಳು. ಈ ವೇಳೆ ಅನಿರುದ್ದ್ ಎಂಬಾತನ ಫ್ರೋಫೈಲ್ ನಿಂದ ಹಾಯ್ ಅಂತ ಮೆಸೆಜ್ ಬಂದಿತ್ತು. ಚಾಟಿಂಗ್ ಮೂಲಕವೇ ಬಣ್ಣಬಣ್ಣದ ಮಾತುಗಳಿಂದ ಯುವತಿಯನ್ನ ಈ  ಅನಿರುದ್ದ್ ಅನ್ನೋ ಕಾಮಿ ಬಲೆಗೆ ಬೀಳಿಸಿದ್ದ. ಹಲವು ದಿನಗಳ ಕಾಲ ಚಾಟಿಂಗ್ ನಲ್ಲೆ ಇದ್ದ ಪ್ರೇಮಿಗಳು  ನಂತರ ಮುಖಾ ಮುಖಿ ಭೇಟಿಯಾಗೊದಿಕ್ಕೆ ಪ್ಲ್ಯಾನ್ ಮಾಡಿದ್ರು.ಅದ್ರಂತೆ ಒಂದು ದಿನ ಯುವತಿ ಅನಿರುದ್ ನನ್ನ ಮೀಟ್ ಮಾಡಿದ್ದಾಗ  ಶಾಕ್ ಆಗಿದ್ಲು..ಯಾಕೆಂದ್ರೆ ಅನಿರುದ್ಧ್ ನ ವೇಶಭೂಷಣ ನೋಡಿದ ಯುವತಿಗೆ ಈತ ಮುಸ್ಲಿಂ ಯುವಕ ಅನ್ನೋದು ಗೊತ್ತಾಗಿದೆ , ಅಲ್ಲದೆ ಈತನ ಹೆಸ್ರು ಅನಿರುದ್ದ್ ಅಲ್ಲ, ಮುದಾಸಿರ್ ಅನ್ನೊ ಸತ್ಯ ಬೆಳಕಿಗೆ ಬಂದಿದೆ.

 ಈ ವೇಳೆ ಆತ ನೀನು ನನ್ನನ್ನ ಪ್ರೀತಿಸುವುದಿಲ್ಲ ಅಂದುಕೊಂಡು ಈರೀತಿ ಸುಳ್ಳು ಹೇಳಿದ್ದೆ ಎಂದು ಮುದಾಸಿರ್ ಮನವೊಲಿಸಿದ್ದ. ನಂತರ ನಾನು ನಿನ್ನೇ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ, ಕೆಲವು ದಿನಗಳ ನಂತರ, ಈ ಮುದಾಸಿರ್ ತನ್ನ ತಾಯಿಗೆ ಹುಷಾರಿಲ್ಲ ಎಂದು ಯುವತಿ ಬಳಿ ಒಂದು ಲಕ್ಷ ಹಣಪೀಕಿದ್ದ. ಹಣ ಕೊಟ್ಟ ಒಂದು ತಿಂಗಳ ನಂತ ತನ್ನ ತಾಯಿ ತೀರಿ ಹೋಗಿದ್ದಾಳೆ ಎಂದು ನಾಟಕ ಮಾಡಿದ್ದು, ನಂತರ  ನಾನು ನನ್ನ ತಮ್ಮನನ್ನ ನೋಡಲು ದುಬೈಗೆ ಹೋಗಿ ಬರ್ತೇನೆ ಎಂದು ಕಥೆ ಕಟ್ಟಿ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದ. ಇತ್ತಾ ಯುವತಿ, ಮುದಾಸಿರ್ ಇವತ್ತು ಬರ್ತಾನೆ,ನಾಳೆ ಬರ್ತಾನೆ ಅಂತ ಕಾಯುತ್ತಿದ್ದಳು, ನಂತರ ಅನುಮಾನಗೊಂಡು ಮುದಾಸಿರ್ ನ ಪತ್ತೆಗೆ ಮುಂದಾಗಿದ್ದಾಳೆ‌. ಇದೆ ವೇಳೆ ಮುದಾಸಿರ್ ಸಹೋದರನನ್ನ ಸಂಪರ್ಕಿಸಿದ್ದಾಗ, ಆತನ ತಾಯಿ ತೀರಿ ಹೋಗಿಲ್ಲ ತಾಯಿ ಕಾಶ್ಮೀರದಲ್ಲಿ ವಾಸ ಮಾಡಿಕೊಂಡಿದ್ದಾರೆ ಅನ್ನೋದು ಗೊತ್ತಾಗಿತ್ತು. ಅಲ್ಲದೆ  ಮುದಾಸಿರ್ ಬೆಂಗಳೂರಲ್ಲೆ ವಾಸ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು,ಕೂಡಲೆ ಮನೆ ಹುಡುಕಿ  ಮನೆ ಬಳಿ ಹೋದಾಗ ಖತರ್ನಾಕ್  ಉದಾಸಿರ್ ಈಗಾಗ್ಲೆ ಮದುವೆಯಾಗಿ ಹೆಂಡತಿ ಜೊತೆ ವಾಸವಾಗಿರೋದು ಬೆಳಕಿಗೆ ಬಂದಿತ್ತು. ಈದನ್ನ ನೋಡಿದ ಸಂತ್ರಸ್ತೆ ಸೀದ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ