ಶೂ ಹಾಕಿಕೊಳ್ಳುವ ಮೊದಲು ಎಚ್ಚರ ವಹಿಸಿ; ಇಲ್ಲದಿದ್ದರೆ ಹಾವು ಹೆಡೆ ಎತ್ತಬಹುದು!
ಬುಧವಾರ, 13 ಡಿಸೆಂಬರ್ 2017 (12:17 IST)
ಮೈಸೂರು: ರಾತ್ರಿ ಮನೆಯ ಹೊರಗೆ ಕಳಚಿಟ್ಟ ಶೂನಲ್ಲಿ ನಾಗರ ಹಾವೊಂದು ಸೇರಿಕೊಂಡು ಬೆಳಿಗ್ಗೆ ಶೂ ಹಾಕಿಕೊಳ್ಳಲು
ಹೋದಾಗ ಬುಸ್ ಎಂದು ಹಡೆ ಎತ್ತಿದ ಘಟನೆಯೊಂದು ಮೈಸೂರಿನ ಆರ್ ಎಂ ಪಿ ಬಡಾವಣೆಯಲ್ಲಿ ನಡೆದಿದೆ.
ಆರ್ ಎಂ ಪಿ ಬಡಾವಣೆಯಲ್ಲಿ ವಾಸವಾಗಿರುವ ಮಹೇಶ್ ಎಂಬುವವರ ಶೂನಲ್ಲಿ ರಾತ್ರಿ ನಾಗವೊಂದು ಸೇರಿಕೊಂಡಿತಂತೆ, ಬೆಳಿಗ್ಗೆ ಅವರು ಶೂ ಧರಿಸಲು ಹೋದಾಗ ಹಾವು ಹೆಡೆ ಎತ್ತಿದ್ದಾಗ ಮಹೇಶ್ ಅವರು ಭಯದಿಂದ ತಬ್ಬಿಬ್ಬಾದರು.
ಉರಗ ಸಂರಕ್ಷಕ ಕೆಂಪರಾಜು ಅವರು ಬಂದು ಹಾವನ್ನು ಸಂರಕ್ಷಿಸಿ ಜನರ ಆತಂಕವನ್ನು ದೂರ ಮಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ