ಬೆಳಗಾವಿ ಜಿಲ್ಲೆಯ ರಾಜಕೀಯ ಗಲಾಟೆದಿಂದಲೇ ಲಾಭ ಪಡೆದು ಪರೋಕ್ಷವಾಗಿ ಆಡಳಿತಕ್ಕೆ ಬಂದಿರೋ ಸಿಎಂಗೆ ಇದೀಗ ಅದೇ ರಾಜಕೀಯ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.
ವಿಧಾನ ಪರಿಷತ್ ಚುನಾವಣೆ ಫೆಬ್ರವರಿಯಲ್ಲಿ ನಡೆಯಲಿದ್ದು ಡಿಸಿಎಂ ಹಾಗೂ ಸಚಿವ ಸ್ಥಾನ ಉಳಿಸಿಕೊಳ್ಳಬೇಕಾದರೆ ಲಕ್ಷ್ಮಣ ಸವದಿಗೆ ಎಂಎಲ್ ಸಿ ಆಗೋದು ಅನಿವಾರ್ಯ. ಹೀಗಾಗಿ ಸದ್ಯ ಡಿಸಿಎಂ ಆಗಿದ್ದರೂ ಸಚಿವ ಸ್ಥಾನ ಉಳಿಸಿಕೊಳ್ಳಬೇಕೆಂದರೆ ಎಂಎಲ್ ಸಿ ಟಿಕೆಟ್ ಕೊಡಿ ಅಂತ ಸಿಎಂ ಬಿ.ಎಸ್.ಯಡಿಯೂರಪ್ಪ ಮೇಲೆ ಒತ್ತಡ ತಂತ್ರ ಹೇರುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರಲಾರಂಭಿಸಿವೆ.
ಇನ್ನು ಬೆಳಗಾವಿ ಜಿಲ್ಲೆಯವರೇ ಆಗಿರೋ ಉಮೇಶ್ ಕತ್ತಿ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಮಂತ್ರಿ ಸ್ಥಾನ ಈ ಬಾರಿ ಬೇಕೇ ಬೇಕು ಅಂತ ಸಿಎಂ ಮುಂದೆ ಪಟ್ಟು ಹಿಡಿದು ಕುಳಿತಿದ್ದಾರೆ.
ಹೀಗಾಗಿ ಬೆಳಗಾವಿ ಜಿಲ್ಲೆಯ ನಾಯಕರ ರಾಜಕೀಯ ದಾಳಗಳಿಗೆ ಸಿಎಂ ಅದ್ಯಾವ ರೀತಿ ಉತ್ತರ ನೀಡಿ ಸಮಾಧಾನ ಮಾಡಿ ಸಮಸ್ಯೆ ಪರಿಹರಿಸುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.