ಪಕ್ಷದ ಮಾನ ಹರಾಜು ಹಾಕಿದವರಿಗೆ ಟಿಕೆಟ್ ಕೊಟ್ಟಿದ್ದೀರಾ? ಬೇಳೂರು ಗೋಪಾಲಕೃಷ್ಣ ಆಕ್ರೋಶ
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಬದಲಿಗೆ ಹರತಾಳು ಹಾಲಪ್ಪ ಅವರಿಗೆ ಸಾಗರ ಟಿಕೆಟ್ ನೀಡಲಾಗಿದೆ. ಇದರಿಂದ ಬೇಳೂರು ರಾಜ್ಯಾಧ್ಯಕ್ಷ ವಿರುದ್ಧವೇ ಹರಿ ಹಾಯ್ದಿದ್ದಾರೆ ಎನ್ನಲಾಗಿದೆ.
ಮೊದಲಿಗೆ ತನಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರವಿಲ್ಲ ಎಂದಿದ್ದ ಬೇಳೂರು ನಂತರ ನನ್ನ ಬದಲು ಬೇರೆ ಕ್ಷೇತ್ರದಿಂದ ವಲಸೆ ಬಂದವರಿಗೆ ಟಿಕೆಟ್ ಕೊಡಲಾಗಿದೆ. ಅದರಲ್ಲೂ ಪಕ್ಷದ ಮಾನ (ಹಾಲಪ್ಪ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು) ಹರಾಜು ಹಾಕಿದವರಿಗೆ ಟಿಕೆಟ್ ಕೊಟ್ಟಿದ್ದೇಕೆ? ಎಂದು ಕಿಡಿ ಕಾರಿದ್ದಾರೆ.
ಹಾಗಿದ್ದರೂ ಪಕ್ಷದ ವಿರುದ್ಧ ಹೋಗಲ್ಲ. ನನ್ನ ನಾಯಕರು ಕೆಎಸ್ ಈಶ್ವರಪ್ಪ ಮತ್ತು ಅನಂತ ಕುಮಾರ್ ಎಂದು ಬಿಎಸ್ ವೈ ಹೆಸರು ಹೇಳದೇ ಟಾಂಗ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.