ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ನೋಡಿ ಡಿವಿ ಸದಾನಂದ ಗೌಡ ಟಾಂಗ್ ಕೊಟ್ಟಿದ್ದು ಹೀಗೆ!
ಸೋಮವಾರ, 16 ಏಪ್ರಿಲ್ 2018 (09:07 IST)
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಘೋಷಣೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ ನೋಡಿ ಬಿಜೆಪಿ ನಾಯಕ, ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಟ್ಟಿಯಲ್ಲಿ ನಾಯಕರ ಮಕ್ಕಳಿಗೆ ಟಿಕೆಟ್ ನೀಡುರುವುದನ್ನು ನೋಡಿ ಲೇವಡಿ ಮಾಡಿರುವ ಅವರು ದಲಿತ ನಾಯಕರ ಮಕ್ಕಳಿಗೆ ಯಾಕೆ ಟಿಕೆಟ್ ಕೊಡಲಿಲ್ಲವೋ ಎಂದು ಟೀಕಿಸಿದ್ದಾರೆ.
‘ಸಿದ್ದರಾಮಯ್ಯ ಪುತ್ರನಿಗೆ ಟಿಕೆಟ್ ಸಿಗುತ್ತದೆ. ರಾಮಲಿಂಗಾ ರೆಡ್ಡಿ ಪುತ್ರಿಗೂ ಟಿಕೆಟ್ ಇದೆ. ಜಯಚಂದ್ರ ಪುತ್ರನಿಗೆ ಟಿಕೆಟ್ ಕೊಡುತ್ತಾರೆ. ಆದರೆ ದಲಿತ ಪರ ಹೋರಾಟಗಾರರ ನಾಯಕ ದಿವಂಗತ ಬಸವಲಿಂಗಪ್ಪ ಅವರ ಪುತ್ರನಿಗೆ ಟಿಕೆಟ್ ಯಾಕೆ ಕೊಡಲಿಲ್ಲ? ಮಹದೇವ ಪುತ್ರನಿಗೆ ಟಿಕೆಟ್ ಯಾಕೆ ಕೊಡಲಿಲ್ಲ? ಕಾಂಗ್ರೆಸ್ ಯಾವತ್ತೂ ದಲಿತರನ್ನು ಅವಗಣಿಸಿದೆ’ ಎಂದು ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.