ಬೆಂಗಳೂರು: ಎಲ್ಲಾ ಬೆಲೆ ಏರಿಕೆಗಳ ಬಿಸಿ ನಡುವೆ ಈಗ ಬೆಂಗಳೂರಿಗರಿಗೆ ಆಟೋ ದರ ಏರಿಕೆಯ ಬಿಸಿ ತಗುಲಿದೆ. ನಿರೀಕ್ಷೆಯಂತೇ ಬೆಂಗಳೂರಿನಲ್ಲಿ ಆಟೋ ದರ ಏರಿಕೆ ಮಾಡಲಾಗಿದ್ದು ಎಷ್ಟು ಹೆಚ್ಚಳವಾಗಲಿದೆ ಇಲ್ಲಿದೆ ವಿವರ.
ಬೆಂಗಳೂರಿನಲ್ಲಿ ಈಗ ಕನಿಷ್ಠ ದರ 30 ರೂ. ಗಳಷ್ಟಿದೆ. ಆದರೆ ಈಗ 6 ರೂ. ಹೆಚ್ಚಳವಾಗಲಿದ್ದು, ಇನ್ನು ಮುಂದೆ ಕನಿಷ್ಠ ದರ 36 ರೂ. ಆಗಲಿದೆ. ನಂತರದ ಪ್ರತೀ ಕಿ.ಮೀಗೆ 15-18 ರೂಪಾಯಿಗೆ ಏರಿಕೆಯಾಗಲಿದೆ. ಮೊದಲ ಐದು ನಿಮಿಷ ಕಾಯುವಿಕೆ ಉಚಿತವಾಗಿರಲಿದೆ.
ಪರಿಷ್ಕೃತ ದರ ಆಗಸ್ಟ್ 1 ರಿಂದಲೇ ಜಾರಿಗೆ ಬರಲಿದೆ. ಗ್ರಾಹಕರು ಇನ್ನು ಮಿನಿಮಮ್ 36 ರೂ. ತೆರಬೇಕಾಗುತ್ತದೆ. ಅಷ್ಟೇ ಅಲ್ಲ 36 ರೂ.ಗೆ ಒಂದು ಆಟೋದಲ್ಲಿ ಮೂರು ಜನ ಮಾತ್ರ ಪ್ರಯಾಣಿಸಬಹುದಾಗಿದೆ. ಪ್ರಯಾಣಿಕರ ಲಗೇಜು ದರ 20 ಕೆ.ಜಿ.ವರೆಗೆ ಉಚಿತವಾಗಿರುತ್ತದೆ. 20 ಕೆ.ಜಿಗಿಂತ ಹೆಚ್ಚಿದ್ದರೆ ಲಗೇಜ್ ದರವೆಂದು 10 ರೂ. ನಿಗದಿ ಮಾಡಲಾಗಿದೆ.
ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಒನ್ ಆಂಡ್ ಹಾಫ್ ಚಾರ್ಜ್ ಕೊಡಬೇಕು. ಈಗ ಪರಿಷ್ಕೃತವಾದ ದರ ಪಟ್ಟಿಯನ್ನು ಆಟೋ ಮೀಟರ್ ನಲ್ಲಿ ಪ್ರದರ್ಶನವಾಗುವಂತೆ ಮೀಟರ್ ಗಳನ್ನು ಆಗಸ್ಟ್ 31 ರೊಳಗಾಗಿ ಪುನಃಸ್ಥಾಪನೆ ಮಾಡಿ ಮುದ್ರೆ ಹಾಕಿಸಿಕೊಳ್ಳಬೇಕು ಎಂದು ಬೆಂಗೂರು ನಗರ ಜಿಲ್ಲೆಯ ಪ್ರಾದೇಶಕ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ.