ಲಂಡನ್ ಯುವಕನ ಕೈ ಹಿಡಿದ ಸಿಲಿಕಾನ್ ಸಿಟಿ ಹುಡುಗಿ
ಬೆಂಗಳೂರು: ಸಿಲಿಕಾನ್ ಸಿಟಿಯ ಕುವರಿ ಲಂಡನ್ ಯುವಕನ ಜತೆ ಸಪ್ತಪದಿ ತುಳಿದಿದ್ದಾಳೆ.
ಇಬ್ಬರು ಪ್ರೀತಿಸುತ್ತಿರುವ ವಿಷಯವನ್ನು ಶೃತಿ ತಮ್ಮ ಪೋಷಕರಿಗೆ ತಿಳಿಸಿ ಮದುವೆಗೆ ಒಪ್ಪಿಸಿದ್ದಾರೆ. ಇತ್ತ ಪ್ಯಾಟ್ರಿಕ್ ಮನೆಯವರು ಒಪ್ಪಿದ್ದು, ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ. ಬಸವನಗುಡಿಯ ಗಂಜಾಂ ಕಲ್ಯಾಣಮಂಟಪದಲ್ಲಿ ಈ ಮದುವೆ ನಡೆಯಿತು.
ಇಬ್ಬರೂ ಸಹ ಸಾಂಪ್ರದಾಯಿಕೆ ಉಡುಗೆಯಲ್ಲಿ ಮಿಂಚುತ್ತಿದ್ದರು. ದೇಶ, ಜಾತಿ ಭಾಷೆಯ ಗಡಿ ದಾಟಿದ ಪ್ರೇಮ ಪ್ರಕರಣವೊಂದು ಮದುವೆಯಲ್ಲಿ ಸುಖಾಂತ್ಯ ಕಂಡಿದೆ.