ಇಂದು ಐತಿಹಾಸಿಕ ಬೆಂಗಳೂರು ಕರಗ

ಮಂಗಳವಾರ, 11 ಏಪ್ರಿಲ್ 2017 (19:25 IST)
ಬೆಂಗಳೂರು ನಗರದ ಜನ ಕಾತರದಿಂದ ಕಾಯುತ್ತಿರುವ ಕರಗ ಮಹೋತ್ಸವಕ್ಕೆ ಮಧ್ಯರಾತ್ರಿ 12 ಗಂಟೆಗೆ ಚಾಲನೆ ಸಿಗಲಿದೆ. ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇಗುಲದಲ್ಲಿ ಧಾರ್ಮಿಕ ಕೈಂಕರ್ಯಗಳು ಮುಗಿದ ಬಳಿಕ ಹೂವಿನ ಕರಗ ಆರಂಭವಾಗಲಿದೆ.
 

 ಕೆ.ಆರ್. ಮಾರುಕಟ್ಟೆಯ ಸುತ್ತ ಕರಗ ಸಾಗುವ ನಗರ್ತ ಪೇಟೆ, ಅರಳೆ ಪೇಟೆ, ಕಬ್ಬನ್ ಪೇಟೆ, ಚಿಕ್ಕಪೇಟೆ ಸೇರಿದಂತೆ ಕರಗ ಸಾಗುವ ಪ್ರದೇಶಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ರಾತ್ರಿ 11ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೆ ಮಾರ್ಕೆಟ್`ನಿಂದ ಮೈಸೂರು ಬ್ಯಾಂಕ್ ಸರ್ಕಲ್`ವರೆಗೆ ಸಂಚಾರ ನಿರ್ಬಂಧಿಸಲಾಗಿದೆ.

ಬೆಂಗಳೂರು ಕರಗ ಕೇವಲ ಬೆಂಗಳೂರಿಗರಿಗಷ್ಟೇ ಅಲ್ಲ. ಸುತ್ತಮುತ್ತಲಿನ ಪ್ರದೇಶಗಳ ಜನರು ಆಗಮಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ, ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ ದೇವನಹಳ್ಳಿಯಿಂದಲೂ ಜನ ಾಗಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ