ಬೆಂಕಿಗೆ ಬೆಚ್ಚಿ ಬಿದ್ದ ಬೆಂಗಳೂರು ಅಧಿಕಾರಿಗಳು

ಬುಧವಾರ, 21 ಆಗಸ್ಟ್ 2019 (20:05 IST)
ಬೆಂಕಿಗೆ ಬೆಂಗಳೂರು ಅಧಿಕಾರಿಗಳು ಬೆಚ್ಚಿಬಿದ್ದು ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬಿಬಿಎಂಪಿ ಸಭಾಂಗಣದ ಕಚೇರಿಯಲ್ಲಿದ್ದ ಉಪಕರಣಗಳು ಸಂಪೂರ್ಣ ‌ಸುಟ್ಟು‌ ಭಸ್ಮವಾಗಿರುವಂತಹ ಘಟನೆ ಬೆಂಗಳೂರು ‌ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯ ಸಭಾಂಗಣದಲ್ಲಿ ನಡೆದಿದೆ.

ಸಭಾಂಗಣದಲ್ಲಿ‌ ಸತತ ಸಭೆಗಳಿದ್ದ ಕಾರಣ ಸಭೆಯಲ್ಲಿ ಮೈಕ್ ಹಾಗು‌ ಎಸಿ ಬಳಕೆಯನ್ನು ಮುಂಜಾನೆಯಿಂದ ಮಾಡುತ್ತಿದ್ದು ಪದೇ ಪದೇ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸಭಾಂಗಣ ತುಂಬಾ ಬೆಂಕಿ ಆವರಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಸಭೆಯಲ್ಲಿದ್ದ ಅಧಿಕಾರಿಗಳು ಹಾಗು‌ ಸಿಬ್ಬಂದಿ ಗಾಬರಿಗೊಂಡು‌ ಸಭಾಂಗಣದಿಂದ ಹೊರಗೆ ಓಡಿ ಹೋದರು.

ನಂತರ ಬಿಬಿಎಂಪಿಯಲ್ಲಿನ ಸಂಪೂರ್ಣ ವಿದ್ಯುತ್ ಕಟ್ ಮಾಡಿ ಹೊತ್ತಿ ಉರಿಯುತ್ತಿದ್ದು ಬೆಂಕಿಯನ್ನು ಆರಿಸುವಂತ ಉಪಕರಣದಿಂದ ಬೆಂಕಿಯನ್ನು ನಂದಿಸಿದ್ದಾರೆ. ಇನ್ನು ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಉಪಕರಣಗಳು ಹಾಗು ದಾಖಲೆಗಳು ಸಂಪೂರ್ಣ ‌ಸುಟ್ಟು ಭಸ್ಮವಾಗಿದೆ ಎಂಬ ಮಾತು‌ ಕೇಳಿ ಬರುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ‌ದಳ ಸಿಬ್ಬಂದಿ ಭೇಟಿ‌ ನೀಡಿ‌ ಪರಿಶೀಲನೆ ‌ನಡೆಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ