ಮೈತ್ರಿಸರ್ಕಾರ ಬೀಳಲು ಕಾರಣವಾದ ಪ್ರೇತಾತ್ಮಕ್ಕೆ ಬಿಎಸ್ ವೈ ಅವಕಾಶ - ಸಾ.ರಾ.ಮಹೇಶ್

ಬುಧವಾರ, 21 ಆಗಸ್ಟ್ 2019 (11:57 IST)
ಬೆಂಗಳೂರು : ಇದೊಂದು ಅಪವಿತ್ರ ಸಚಿವ ಸಂಪುಟ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಸಾ.ರಾ.ಮಹೇಶ್  ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸುದ್ಧಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್ ಅವರು, ‘25 ದಿನಗಳ ಬಳಿಕ ಅಪವಿತ್ರ ಸರ್ಕಾರದ ಸಚಿವ ಸಂಪುಟ ರಚನೆಯಾಗಿದೆ. ನಾಲ್ಕು ,ಐದು ಬಾರಿ ಗೆದ್ದವರಿಗೂ ಸಚಿವ ಸ್ಥಾನ ಕೊಟ್ಟಿಲ್ಲ. ಮೈತ್ರಿ ಸರ್ಕಾರ ಬೀಳಲು ಸಹಕಾರ ಮಾಡಿದ  ಈ ಭಾಗದ ಪ್ರೇತಾತ್ಮಕ್ಕೆ ಅವಕಾಶ ಮಾಡಿಕೊಡಲು ಬಿಎಸ್ ವೈ ಈ ನಿರ್ಧಾರ ಮಾಡಿದ್ದಾರೆ ಎಂದು ಹೇಳುವುದರ ಮೂಲಕ ಹೆಚ್.ವಿಶ್ವನಾಥ್ ಅವರಿಗೆ ಟಾಂಗ್ ನೀಡಿದ್ದಾರೆ.


ಫೋನ್ ಕದ್ದಾಲಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಮುದಿಟ್ಟುಕೊಂಡು ನಮ್ಮನ್ನ ಹಿಡಿತದಲ್ಲಿಡೋಕೆ ಸಾಧ್ಯವಿಲ್ಲ .ಈ ರೀತಿ ಬಿಜೆಪಿ ಭಾವಿಸಿದ್ದರೆ ಅದು ಅವರ ಭ್ರಮೆ. ಇತ್ತೀಚಿನ ಬೆಳವಣೆಗೆಗಳನ್ನು ಗಮನಿಸಿದರೆ ಮಧ್ಯಂತರ ಚುನಾವಣೆ ಎದುರಾಗೋ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ