Bengaluru Stampede: ಆರ್‌ಸಿಬಿ ಮಾರ್ಕೆಂಟಿಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಕಾನೂನಿನಲ್ಲಿ ಹಿನ್ನಡೆ
ಜೂನ್ 6 ರಂದು ಮುಂಜಾನೆ ತನ್ನ ಬಂಧನದ ಕಾನೂನುಬದ್ಧತೆಯನ್ನು ಸೋಸಲೆ ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ. ಪೊಲೀಸ್ ಕ್ರಮವು ರಾಜಕೀಯ ನಿರ್ದೇಶನಗಳಿಂದ ಪ್ರಭಾವಿತವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠವು ನಾಳೆ ಮಧ್ಯಂತರ ಆದೇಶವನ್ನು ಪ್ರಕಟಿಸಲು ನಿರ್ಧರಿಸುವ ಮೊದಲು ಸೋಸಲೆ ಅವರ ವಕೀಲರು ಮತ್ತು ರಾಜ್ಯ ಸರ್ಕಾರದಿಂದ ವಾದಗಳನ್ನು ಆಲಿಸಿತು.