ಬೆಂಗಳೂರು ಹವಾಮಾನ, ಭಾರೀ ಮಳೆಗೆ ಪರದಾಡಿದ ಜನರು, ಈ ಪ್ರದೇಶಗಳಲ್ಲಿ ಭಾರೀ ಮಳೆ ಸಾಧ್ಯತೆ

Sampriya

ಮಂಗಳವಾರ, 15 ಅಕ್ಟೋಬರ್ 2024 (16:21 IST)
Photo Courtesy X
ಬೆಂಗಳೂರು: ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬೆಂಗಳೂರಿನ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ  ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗಿದ್ದು, ಬೀದಿ ಬದಿ ವ್ಯಾಪಾರಸ್ಥರು ಸಂಕಷ್ಟ ಅನುಭವಿಸಿದ್ದಾರೆ.ಇನ್ನೂ ನಗರದ ಎಲ್ಲೆಡೆ ಹಲವಡೆ ಜಲಾವೃತವಾಗಿದೆ.

ಮಂಗಳವಾರ ಬೆಳಿಗ್ಗೆ 8:30 ಕ್ಕೆ 16.2 ಮಿಮೀ ಮಳೆ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ರಾತ್ರಿಯವರೆಗೂ ಮಳೆ ಮುಂದುವರಿಯುವ ಸೂಚನೆಯಿದೆ. ಜಲಾವೃತದಿಂದಾಗಿ ಹಲವಾರು ವಾಹನಗಳು ಗಂಟೆಗಟ್ಟಲೆ ಚಲಿಸಲು ಸಾಧ್ಯವಾಗದೆ ಬೆಂಗಳೂರು ಸಂಚಾರ ಹದಗೆಟ್ಟಿದೆ.

ಬೆಂಗಳೂರಿನ ತಗ್ಗು ಪ್ರದೇಶಗಳು ನೀರಿನಿಂದ ಜಲಾವೃತವಾಗಿರುವುದರಿಂದ ಜನರು ತಮ್ಮ ವಾಹನಗಳನ್ನು ಫ್ಲೈಓವರ್‌ಗಳ ಮೇಲೆ ನಿಲ್ಲಿಸುತ್ತಿರುವುದು ಟ್ರಾಫಿಕ್ ಸಮಸ್ಯೆಗೆ ಮತ್ತಷ್ಟು ಕಾರಣವಾಗಿದೆ. ಹೆಬ್ಬಾಳ ಮೇಲ್ಸೇತುವೆಯು ಸುದೀರ್ಘ ಟ್ರಾಫಿಕ್ ಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ. ಫ್ಲೈಓವರ್‌ನಲ್ಲಿ 30 ರಿಂದ 40 ನಿಮಿಷಗಳ ವಿಳಂಬವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ ಮತ್ತು ಅದರ ಹಲವಾರು ವೀಡಿಯೊಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಇತರೆ ಭಾಗಗಳಾದ ಸರ್ಜಾಪುರ ರಸ್ತೆ, ಮಹದೇವಪುರ, ಮೈಸೂರು ರಸ್ತೆ ಮೇಲ್ಸೇತುವೆ, ಮಾರತ್ತಹಳ್ಳಿ, ಶೇಷಾದ್ರಿಪುರಂ, ಸಂಜಯ್ ನಗರ, ಹುಣಸೆಮಾರನಹಳ್ಳಿ, ಹೊರ ವರ್ತುಲ ರಸ್ತೆ (ಒಆರ್‌ಆರ್) ಬನ್ನೇರುಘಟ್ಟ ರಸ್ತೆ ಮುಂತಾದೆಡೆ ಭಾರಿ ಮಳೆಯಿಂದಾಗಿ ಜನರು ತೊಂದರೆ ಅನುಭವಿಸಿದ್ದಾರೆ.

ಮುಂದಿನ 7 ದಿನಗಳ ಹವಾಮಾನ ಮುನ್ಸೂಚನೆ

ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಬೆಂಗಳೂರು ಸುಮಾರು ಒಂದು ವಾರದವರೆಗೆ ನಿರಂತರ ಮಳೆಯನ್ನು ಅನುಭವಿಸಬೇಕಾಗುತ್ತದೆ ಮತ್ತು ಅಕ್ಟೋಬರ್ 14 ರಿಂದ ಅಕ್ಟೋಬರ್ 17 ರ ನಡುವೆ ಅತಿ ಹೆಚ್ಚು ಮಳೆ ಬೀಳುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ