ಬೆಳ್ತಂಗಡಿ: ಧರ್ಮಸ್ಥಳದ ಸುತ್ತಾಮುತ್ತಾ ಹಲವು ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣ ಸಂಬಂಧ ಇಂದು ದೂರುದಾರ ಗುರುತಿಸಿದ 11ನೇ ಗುರುತಿನ ಪಕ್ಕದಲ್ಲಿ ಸ್ಥಳ ಪರಿಶೀಲನೆ ನಡೆಸಿದಾಗ ಕಳೇಬರಹ ಪತ್ತೆಯಾಗಿದೆ.
ದೂರುದಾರ ಗುರುತಿಸಿದ 11ನೇ ಪಾಯಿಂಟ್‌ನ ಪಕ್ಕದಲ್ಲಿ ಸ್ಥಳ ಪರಿಶೀಲನೆ ನಡೆಸಿದಾಗ ಕಳೇಬರಹಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಗುರುವಾರದಿಂದ ಉತ್ಖನನ ಆರಂಭಗೊಂಡಿದ್ದು, ದೂರುದಾರ ಗುರುತಿಸಿದ 6ನೇ ಪಾಯಿಂಟ್‌ನಲ್ಲಿ ಕೆಲ ಮನುಷ್ಯನ ಮೂಳೆಗಳು ಪತ್ತೆಯಾಗಿತ್ತು. ಅದು ಗಂಡಸಿನ ಮೂಳೆ ಎಂದು ಹೇಳಲಾಗಿದೆ.
ಎಸ್.ಐ.ಟಿಯಿಂದ ಕಾರ್ಯಾಚರಣೆ ಚುರುಕುಗೊಂಡಿದ್ದು. ಅವಶೇಷಗಳ ಮಹಜರು ಕಾರ್ಯ ನಡೆಯುತ್ತಿದೆ.