ಸುರತ್ಕಲ್ ಟೋಲ್‍ನಲ್ಲಿ ಮುಂದುವರಿದ ಹಣ ಸಂಗ್ರಹ
ಈ ಟೋಲ್ಗೇಟ್ ಹೆಜಮಾಡಿ ಟೋಲ್ಗೇಟ್ ಜೊತೆಗೆ ವಿಲೀನಗೊಳ್ಳುತ್ತಿರುವುದರಿಂದ ಜನತೆಗೆ ದುಪ್ಪಟ್ಟು ಬರೆ ಬೀಳುವ ಆತಂಕ ಎದುರಾಗಿದೆ.
ಟೋಲ್ಗೇಟ್ ವಿಚಾರದಲ್ಲಿ ಈವರೆಗೆ ಒಂದು ಹಂತದ ರಾಜಕೀಯ ಮೇಲಾಟ ನಡೆದಿದ್ರೆ ಇದೀಗ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ವೇದಿಕೆಯಾಗಿದೆ. ಟೋಲ್ಗೇಟ್ ರದ್ದಾಯ್ತು ಎನ್ನುವ ಸಂಸದರ ಟ್ವೀಟ್ ನಂಬಿ ಟೋಲ್ಗೇಟ್ ರದ್ದಾಯ್ತು ಅಂತಾ ಅಂದ್ಕೊಂಡ್ರೆ ಅಲ್ಲಿ ಟೋಲ್ ಕಲೆಕ್ಷನ್ ಮಾತ್ರ ನಡೆಯುತ್ತಲೇ ಇದೆ.