ವಿದ್ಯುತ್ ದರ ಹೆಚ್ಚಳ ಮಾಡಿ ಎಂದು ಬೆಸ್ಕಾಂಗೆ ಆದೇಶ

ಸೋಮವಾರ, 12 ಜೂನ್ 2023 (14:31 IST)
ಕರ್ನಾಟಕ ವಿದ್ಯುತ್ವಕ್ತಿ ನಿಯಂತ್ರಣ ಆಯೋಗ  (ಕೆಇಆರ್ ಸಿ) ಇಂದ ದರ ಹೆಚ್ಚಳ ಮಾಡುವಂತೆ ಬೆಸ್ಕಾಂ ಗೆ ಆದೇಶ ಮಾಡಿದೆ.ಮೇ 12 ರಂದು ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 70 ಪೈಸೆ ಏರಿಕೆ ಮಾಡಿರುವ ಹಿನ್ನೆಲೆ ಬೆಸ್ಕಾಂ, ಜೂನ್ ತಿಂಗಳಲ್ಲಿ ನೀಡುವ ಮೇ ತಿಂಗಳ ವಿದ್ಯುತ್ ಬಳಕೆಯ ಬಿಲ್ ನಲ್ಲಿ ಪರಿಷ್ಕೃತ ವಿದ್ಯುತ್ ಶುಲ್ಕವನ್ನು ನಮೂದಿಸಿ ಆದೇಶ ಹೊರಡಿಸಿದೆ.ದರ ಪರಿಷ್ಕರಣೆ ಆದೇಶ ಏಪ್ರಿಲ್ ನಿಂದ ಪೂರ್ವನ್ವಯವಾಗುವುದರಿಂದ ಬಿಲ್ ನಲ್ಲಿ ಏಪ್ರಿಲ್ ತಿಂಗಳ ಹಿಂಬಾಕಿಯನ್ನು ನೀಡಲಾಗಿದೆ.
 
 ಕೆಇಆರ್ ಸಿ ಆದೇಶದ ಪ್ರಕಾರ ಎರಡು ಶ್ರೇಣಿಗಳಲ್ಲಿ ವಿದ್ಯುತ್ ಶುಲ್ಕ ಸಂಗ್ರಹವಾಗಲಿದೆ.ಗ್ರಾಹಕರು ಬಳಸುವ ಮೊದಲ 100 ಯೂನಿಟ್ ವಿದ್ಯುತ್ ಗೆ ಪ್ರತಿ ಯೂನಿಟ್ ದರ 4.75 ರೂ 100 ಯೂನಿಟ್ ಮೀರಿದರೆ ಬಳಸಿದ ಅಷ್ಟೂ ಯೂನಿಟ್ ಗೆ ಎರಡನೇ ಶ್ರೇಣಿ ದರ ಫಿಕ್ಸ್ ಆಗಲಿದೆ.ಪ್ರತಿ ಯೂನಿಟ್ ಗೆ 7 ರೂ. ಅನ್ವಯವಾಗಲಿದೆ.
 
ಮೊದಲು ಮೂರು ಶ್ರೇಣಿ ದರಗಳಲ್ಲಿ ಸಂಗ್ರಹ ಮಾಡಲಿದ್ದು,ಮೊದಲ 50 ಯೂನಿಟ್ ಗೆ 4.15 ರೂ.,ನಂತರದ 50 ಯೂನಿಟ್ ಗೆ 5.6 ರೂ ,100 ಯೂನಿಟ್ ಮೀರಿದರೆ 7.15 ರೂ.ಸಂಗ್ರಹಿಸಲಾಗುತ್ತಿತ್ತು.ಇದೀಗ ಎರಡು ಶ್ರೇಣಿ ದರಗಳಲ್ಲಿ  ಸಂಗ್ರಹಿಸಾಲಿರುವ 
ಕೆಇಆರ್‌ಸಿ ಮೇ 12 ರಂದು ಹೊರಡಿಸಿರುವ ಆದೇಶದಲ್ಲಿ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.
 
ದರ ಪರಿಷ್ಕರಣೆಗೆ ಕೆಇಆರ್ ಸಿ ಮುಂದೆ  ನೆವಂಬರ್ ನಲ್ಲಿ ಅರ್ಜಿ ಸಲ್ಲಿಸಿದ್ದ ಎಸ್ಕಾಂ .ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ದರ ಪರಿಷ್ಕರಣೆ ಮಾಡಲಿದೆ.ಕೆಇಆರ್ ಸಿ ಸ್ವಯಂಪ್ರೇರಿತವಾಗಿ ವಿದ್ಯುತ್‌ ದರ ಏರಿಕೆ ಆದೇಶ ನೀಡಲು ಕಾನೂನಿನಲ್ಲಿ ಅವಕಾಶ ಇದೆ.ಈ ವರ್ಷದ ಮಾರ್ಚ್ / ಏಪ್ರಿಲ್ ನಲ್ಲಿ ಜಾರಿಗೆ ಬರಬೇಕಿದ್ದ ದರ ಪರಿಷ್ಕರಣೆ ಮಾಡಲಾಗಿದೆ.ಮಾರ್ಚ್ 29, 2023ರಂದು ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆ ಕೆಇಆರ್ ಸಿ ತಡೆ ಹಿಡಿದಿತ್ತು ಎಂದು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ