ನ್ಯೂ ಇಯರ್ ಆಚರಿಸಲು ಬೆಂಗಳೂರು ಆಸುಪಾಸು ಬೆಸ್ಟ್ ಟೂರಿಸ್ಟ್ ಸ್ಥಳಗಳು

ಶುಕ್ರವಾರ, 29 ಡಿಸೆಂಬರ್ 2023 (10:52 IST)
ಬೆಂಗಳೂರು: ಹೊಸ ವರ್ಷಾಚರಣೆ ಮಾಡಿಕೊಳ್ಳಲು ಯಾವ ಸ್ಥಳಗಳು ಸೂಕ್ತ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಸ್ಥಳಗಳು ನಿಮಗೆ ಸಹಾಯವಾಗಬಹುದು.

ರಾಜ್ಯ ರಾಜಧಾನಿಯ ಜನ ವೀಕೆಂಡ್ ನ ಮಜಾ ಜೊತೆಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಲುವಾಗಿ ಪ್ರವಾಸೀ ತಾಣಗಳತ್ತ ಮುಖ ಮಾಡುತ್ತಿದ್ದಾರೆ. ಹಾಗಿದ್ದರೆ ಬೆಂಗಳೂರಿನ ಆಸುಪಾಸಿರುವ ಮತ್ತು ಈ ಹವಾಮಾನಕ್ಕೆ ತಕ್ಕುದಾಗಿರುವ ಹೊಸ ಟೂರಿಸ್ಟ್ ಜಾಗಗಳು ಯಾವುವು ನೋಡೋಣ.

ಮೈಸೂರು: ಪ್ರವಾಸಿಗರ ಮೊದಲ ಆಯ್ಕೆ ಮೈಸೂರು ಆಗಿರುತ್ತದೆ. ಕ್ರಿಸ್ ಮಸ್ ರಜೆ ಕೂಡಾ ಇರುವುದರಿಂದ ಈಗಾಗಲೇ ಮೈಸೂರಿನ ಬಹುತೇಕ ಪ್ರವಾಸೀ ತಾಣಗಳಲ್ಲಿ ಜನಸಾಗರವೇ ಕಂಡುಬರುತ್ತಿದೆ. ಮೈಸೂರು ಅರಮನೆ, ವಸ್ತುಪ್ರದರ್ಶನ, ಕೆಆರ್ ಎಸ್ ಬೃಂದಾವನ, ರಂಗನತಿಟ್ಟು ಪಕ್ಷಿಧಾಮದತ್ತ ಮುಖಮಾಡಬಹುದು.

ಕೊಡುಗು: ದಕ್ಷಿಣದ ಕಾಶ್ಮೀರವೆಂದೇ ಪರಿಗಣಿಸಲ್ಪಡುವ ಕೊಡಗಿನಲ್ಲಿ ಈಗ ಹವಾಮಾನವೂ ಅತ್ಯುತ್ತಮವಾಗಿದೆ. ಪ್ರೀತಿ ಪಾತ್ರರ ಜೊತೆ ಹೊಷ ವರ್ಷ ಬರಮಾಡಿಕೊಳ್ಳಲು ಸಾಕಷ್ಟು ರೆಸಾರ್ಟ್, ನಿಸರ್ಗಧಾಮಗಳು ಇಲ್ಲಿವೆ.

ಚಿಕ್ಕಮಗಳೂರು: ಗುಡ್ಡಗಾಡು ಪ್ರದೇಶಕ್ಕೆ ಭೇಟಿ ಕೊಡಲು ಇದು ಹೇಳಿ ಮಾಡಿಸಿದ ಸಮಯ. ಅತ್ತ ಮಳೆಯೂ ಇಲ್ಲ, ಇತ್ತ ಚಳಿ ಈಗಷ್ಟೇ ಆರಂಭವಾಗಿದೆ. ಈ ಸಮಯದಲ್ಲಿ ಚಿಕ್ಕಮಗಳೂರು ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣ.

ಇದ್ಯಾವುದೂ ಬೇಡ ಬೆಂಗಳೂರಿನಲ್ಲಿಯೇ ಹೊಸ ವರ್ಷ ಆಚರಿಸಿಕೊಳ್ಳುತ್ತೇವೆ ಎಂದರೆ ಸಾಕಷ್ಟು ಡಿಜೆ ಪಾರ್ಟಿಗಳು ಆಫರ್ ಬೆಲೆಯಲ್ಲಿ ಆಯೋಜನೆಯಾಗಿದ್ದು, ಸ್ನೇಹಿತರ ಜೊತೆ ತೆರಳಿ ಪಾರ್ಟಿ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ