ಮಟನ್ ಸಾಂಬಾರಿನಲ್ಲಿ ಮೂಳೆ ಸಿಗಲಿಲ್ಲವೆಂದು ಮದುವೆಯೇ ರದ್ದು!
ಮಟನ್ ಸಾಂಬಾರಿನಲ್ಲಿ ಮೂಳೆ ಸಿಗಲಿಲ್ಲವೆಂದು ವರ ಮದುವೆಯನ್ನೇ ರದ್ದುಗೊಳಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣ ನಿಜಾಮಾಬಾದ್ ನಲ್ಲಿ ಇಂಥಹದ್ದೊಂದು ಘಟನೆ ನಡೆದಿದೆ.
ವಧು-ವರ ಇಬ್ಬರೂ ಒಪ್ಪಿಯೇ ಮದುವೆಗೆ ಸಿದ್ಧತೆ ನಡೆದಿತ್ತು. ಆದರೆ ಮದುವೆಗೆ ಬಂದ ವರನ ಕಡೆಯವರು ಮಟನ್ ಸಾಂಬಾರಿನಲ್ಲಿ ಮೂಳೆ ಸಿಗಲಿಲ್ಲವೆಂದು ಅಸಾಮಾಧನ ವ್ಯಕ್ತಪಡಿಸಿದ್ದರು. ಇದಾದ ಬಳಿಕ ವಧು ಮತ್ತು ವರನ ಮನೆಯವರ ನಡುವೆ ಜಗಳವೇ ಏರ್ಪಟ್ಟಿತ್ತು.
ಪೊಲೀಸರು ಮಧ‍್ಯಸ್ಥಿಕೆ ವಹಿಸಿ ಸಮಾಧಾನಪಡಿಸಲು ಯತ್ನಿಸಿದರು. ಆದರೆ ಸಾಧ‍್ಯವಾಗಲಿಲ್ಲ. ಕೊನೆಗೆ ವರನ ಕಡೆಯವರು ಮದುವೆ ರದ್ದು ಮಾಡಿ ತಮ್ಮ ಊರಿಗೆ ತೆರಳಿದರು. ಒಂದು ಮೂಳೆ ವಿಚಾರ ವಧುವಿನ ಬಾಳಿಗೇ ಮುಳ್ಳಾಯಿತು.