ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಟಾಂಗ್ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ಪ್ಲಾಪ್ ಆಗಿದೆ, ಇದು ಭಾರತ್ ಜೋಡೋ ಯಾತ್ರೆ ಅಲ್ಲ, ಕೈ ನಾಯಕರಾದ ಸಿದ್ದರಾಮಯ್ಯ, ಡಿಕೆಶಿ ಅವರನ್ನ ಒಂದುಗೂಡಿಸೋದೇ ಜೋಡೋ ಯಾತ್ರೆಯಾಗಿದೆ. ಭಾರತ್ ಜೋಡೋದಿಂದ ರಾಹುಲ್ ಗಾಂಧಿಗೆ ಮುಂಜಾನೆ ಸಂಜೆ ವಾಕಿಂಗ್ ಆಗ್ತಿದೆ ಎಂದರು. ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಕುರಿತು ಅರುಣ್ ಸಿಂಗ್ ಶಾಂಕಿಗ್ ಸ್ಟೇಟಮೇಂಟ್ ನೀಡಿದ್ದು, ಬಸನಗೌಡ ಯತ್ನಾಳ, ಅರವಿಂದ್ ಬೆಲ್ಲದ್, ಬಿಜೆಪಿ ನಾಯಕರಲ್ಲ, ಕೋರ್ಕಮಿಟಿಯಲ್ಲಿ ಯತ್ನಾಳ್ ಇಲ್ಲ ಅವರಿಗೆ ಶೋಕಾಸ್ ನೋಟೀಸ್ ಕೊಡಲಾಗಿದೆ. ಶಿಸ್ತು ಕಮಿಟಿ ಅವರ ಬಗ್ಗೆ ಕ್ರಮ ಕೈಗೊಳ್ಳತ್ತೆ ಎಂದರು. ಜನರಿಗೆ ಜಗಳದಿಂದ ಕೂಡಿದ ಸರಕಾರ ಬೇಡವಾಗಿದೆ. ಬಡ ರೈತರ ಪರವಾಗಿ ಬೆಜೆಪಿ ಕೆಲಸ ಮಾಡುತ್ತಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಸರಕಾರ ಪದೇ ಪದೇ ಅಧಿಕಾರಕ್ಕೆ ಬರುತ್ತಿದ್ದು, ಕರ್ನಾಟಕದಲ್ಲೂ ಇದೇ ಪುನಾರಾವರ್ತನೆಯಾಗುತ್ತದೆ ಎಂದು ಹೇಳಿದ್ದಾರೆ.