ಒಳನಾಡು ಮೀನುಗಾರಿಕೆಗೆ ಪ್ರೋತ್ಸಾಹ ಅಗತ್ಯ

ಭಾನುವಾರ, 16 ಅಕ್ಟೋಬರ್ 2022 (15:22 IST)
ಬೆಂಗಳೂರಿನ ಒಳನಾಡು ಮೀನುಗಾರಿಕೆ ಸಮಾವೇಶದಲ್ಲಿ ಶಿಕ್ಷಣ ಸಚಿವ ಬಿ.ಸಿ‌.ನಾಗೇಶ್ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಗರಂ ಆಗಿದ್ದಾರೆ. ಸಿಎಂ ಭಾಷಣ ವೇಳೆ ವೇದಿಕೆಯಲ್ಲಿ ಪಕ್ಕದವರ ಜತೆ ಮಾತಾಡ್ತಿದ್ದ ಸಚಿವ ನಾಗೇಶ್ ಮಾತನಾಡುತ್ತಿದ್ರು, ಈ ವೇಳೆ ಸಿಟ್ಟಾದ ಸಿಎಂ ನಾಗೇಶ್, ನಿನಗೆ ಮಾತಾಡಬೇಕು ಅಂದ್ರೆ ಹೊರಗೆ ಹೋಗಿ ಮಾತಾಡು ಎಂದರು. ಇನ್ನು ಮೀನುಗಾರಿಕೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಶತಮಾನಗಳಿಂದ ಮೀನು ಮನುಷ್ಯನ ಆಹಾರವಾಗಿದೆ. ಮೀನು ಸಸ್ಯಾಹಾರಿ, ಆದರೆ ಮೀನು ತಿನ್ನುವ ಮನುಷ್ಯ ಮಾಂಸಾಹಾರಿ. ಆದರೆ ಮೀನು ಸಸ್ಯಹಾರಿ ಆಗಿರೋದ್ರಿಂದ ಕೆಲವು ದೇಶಗಳಲ್ಲಿ ಮೀನು ಸಸ್ಯಾಹಾರಿ ಅಂತಾರೆ. ಒಳನಾಡು ಮೀನುಗಾರಿಕೆಗೆ ಕೂಡ ಮಹತ್ವದ್ದಾಗಿದೆ. ಒಳನಾಡಿನಲ್ಲಿ ಮೀನುಗಾರಿಕೆ ಉತ್ಪನ್ನಗಳನ್ನು ಹೆಚ್ಚಿಸಿದರೆ ತಾಜಾ ಆಹಾರದಂತೆ ಒದಗಿಸಬಹುದು. ಸಮುದ್ರದ ಮೀನಿಗೂ ಒಳನಾಡಿನಲ್ಲಿ ಬೆಳೆಯುವ ಮೀನಿಗೂ ವ್ಯತ್ಯಾಸವಿದೆ. ಆದರೆ ಒಳನಾಡು ಮೀನುಗಾರಿಕೆಯನ್ನು ನಾವು ಬೆಳೆಸಬೇಕಿದೆ. ಸಮುದ್ರದ ಮೀನುಗಾರಿಕೆ ಹೆಚ್ಚಿಸಲು ನಾವು ಉತ್ತೇಜನ ಕೊಡುತ್ತಿದ್ದೇವೆ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ