ನೈತಿಕ ಪೊಲೀಸ್ ಗಿರಿ ತೋರಿಸಿದ್ದ ಆರೋಪಿ ಅರೆಸ್ಟ್ - ಭೀಮಾಶಂಕರ್ ಗುಳೇದ್

ಮಂಗಳವಾರ, 29 ಆಗಸ್ಟ್ 2023 (14:24 IST)
ಆತ ಎರಡು ಬಾರಿ ಪಿಯುಸಿ ಫೇಲ್ ಆಗಿ ನಂತರ ಕಷ್ಟಪಟ್ಟು ಪಾಸಾಗಿದ್ದ.. ಬೇರೆ ದೇಶದಲ್ಲಿ ಎಮ್‌ಬಿಬಿಎಸ್ ಓದೋಕೆ ಹೋಗಿ ಸೈಕಲ್‌ ಕೂಡ ಹೊಡೀತಿದ್ದ.. ವಿದೇಶದಲ್ಲೇ ಇದ್ಕೊಂಡು ಓದಿದ್ರೆ ಡಾಕ್ಟರ್ ಆಗ್ತಿದ್ನೇನೋ.. ಆದ್ರೆ ರಜೆ ಟೈಮ್ ಅಂತಾ ಬೆಂಗಳೂರಿಗೆ ಬಂದವ ನೈತಿಕ ಪೊಲೀಸ್ ಗಿರಿ ತೋರಿಸಿ ಕೈದಿಯಾಗಿದ್ದಾನೆ.ಹೆಸ್ರು ಜಾಕೀರ್ ಅಹ್ಮದ್ ಅಂತಾ.. ಇನ್ನೂ 25-26ವಯಸ್ಸು.. ವಿದೇಶದಲ್ಲಿ ಎಮ್‌ಬಿಬಿಎಸ್ ಓದ್ತಿದ್ದವ ಡಾಕ್ಟರ್ ಆಗೋ ಕನಸ್ಸು ಕಂಡಿದ್ದ.. ಅಲ್ಲೇ ಇದ್ಕೊಂಡು ಓದಿದ್ರೆ ಚೆನಾಗ್ ಇರ್ತಿತ್ತು.. ಆದ್ರೆ ರಜೆ ಅಂತಾ ಬೆಂಗಳೂರಿಗೆ ಬಂದಿದ್ದವ ನೈತಿಕ ಪೊಲೀಸ್ ಗಿರಿ ತೋರಿಸಿದ್ದ.. ಅಲ್ದೇ ಅದನ್ನ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದ.. ಹೀಗೆ ಕಿರಿಕ್ ಮಾಡ್ಕೊಂಡು ಹೀರೋಯಿಸಂ ತೋರಿಸಿದ್ದವ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ‌‌‌ ವಿಡಿಯೋ ಒಂದು ವೈರಲ್ ಆಗಿತ್ತು.. ಬುರ್ಕಾ ಹಾಕೊಂಡು ಸ್ನೇಹಿತನ ಜೊತೆ ಹೋಗ್ತಿದ್ದ ಯುವತಿಯೋರ್ವಳನ್ನ ತಡೆದಿದ್ದ ಇದೇ ಜಾಕೀರ್ ಅಹ್ಮದ್ ಆಕೆಯನ್ನ ನಿಂದಿಸಿ ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂಗೆ ಮಾತಾಡಿದ್ದ.. ಪರಿಚಯವೇ ಇಲ್ಲದ ಆಕೆಯನ್ನ ಅನ್ಯ ಕೋಮುವಿನ ಯುವಕನ ಜೊತೆ ಹೋಗ್ತಿದ್ಯಾ..? ಒಂದು ಮುಸ್ಲಿಂ ಯುವತಿಯಾಗಿ ಹಿಂಗೆ ಮಾಡ್ತ್ಯಾ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.. ಅದನ್ನ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದ.. ಇಷ್ಟೆಲ್ಲಾ ಘಟನೆ ನಡೆದಿದ್ದು ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ.. ಹೀಗೆ ಅವಾಜ್ ಹಾಕಿದ್ದ ಜಾಕೀರ್ ನನ್ನ ಪೂರ್ವ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.

ಕೋಲಾರ ಮೂಲದೋನಾದ್ರೂ ವಿದೇಶದಲ್ಲಿ ಎಮ್ ಬಿಬಿಎಸ್ ಓದ್ಕೊಂಡಿದ್ದ ಆರೋಪಿ ಜಾಕೀರ್ ರಜೆ ಅಂತಾ ಗೋವಿಂದಪುರದ ಅಕ್ಕನ ಮನೆಗೆ ಬಂದಿದ್ದ.. ಬೆಂಗಳೂರಿಗೆ ಬಂದವನೇ ಓಡಾಡ್ಕೊಂಡಿದ್ದವ ನಿನ್ನೆ ರಸ್ತೆಬದಿ ತನ್ನ ಪಾಡಿಗೆ ತಾನು ಸ್ನೇಹಿತನ ಜೊತೆ ಹೋಗ್ತಿದ್ದ ಯುವತಿಯನ್ನ ನಿಂದಿಸಿ ನೈತಿಕ ಪೊಲೀಸ್ ಗಿರಿ ಮೆರೆದಿದ್ದ.. ವಿಡಿಯೋ ವೈರಲ್ ಆದ  ನಂತರ ಯುವತಿ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ರು ಸದ್ಯ ಆರೋಪಿಯನ್ನ ಬಂಧಿಸಿರೋ ಪೊಲೀಸರು ಜೈಲಿಗಟ್ಟಿದ್ದಾರೆ.ರಜೆ ಅಂತಾ ಬೆಂಗಳೂರಿಗೆ ಬಂದ್ನಾ, ರಜೆ ಎಂಜಾಯ್ ಮಾಡಿದ್ನಾ.. ಹೋಗಿ ಓದಿದ್ನಾ ಅಂದಂಗಿರ್ಬೇಕಿತ್ತು.. ಹಂಗೇನಾದ್ರು ಮಾಡಿದ್ರೆ ಈ ಆರೋಪಿ ಡಾಕ್ಟರ್ ಆಗ್ತಿದ್ನೇನೋ.. ಆದ್ರೆ ಇರ್ಲಾರ್ದೆ ಇರವೆ ಬಿಟ್ಕೊಂಡಂಗೆ ಕಿರಿಕ್ ಮಾಡಿ ಈಗ ಜೈಲುಪಾಲಾಗಿದ್ದು ತನ್ನ ಲೈಫ್ ನಲ್ಲೇ ನೆಗೆಟಿವ್ ಶೇಡ್ ಮಾಡ್ಕೊಂಡಿದ್ದು ಮಾತ್ರ ನೈತಿಕ ಗಿರಿ ಮನಸ್ಥಿತಿಯ ಪರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ