ಬರ್ತ್ ಡೇ ಪಾರ್ಟಿ ಮುಗಿಸಿ ಈಜಲು ತೆರಳಿದ್ದ ಸ್ನೇಹಿತರು ಸಾವು

ಶನಿವಾರ, 26 ಆಗಸ್ಟ್ 2023 (21:04 IST)
ಸ್ನೇಹಿತನ ಬರ್ತಡೇ ಪಾರ್ಟಿ ಮುಗಿಸಿ ನೀರಲ್ಲಿ ಈಜಲು ಹೋಗಿದ್ದ ಸ್ನೇಹಿತರು ನೀರಲ್ಲಿ ಮುಳುಗಿ ಮೃತರಾಗಿದ್ದಾರೆ. ಪಾರ್ಟಿ ನಂತರ ಮದ್ಯದ ನಶೆಯಲ್ಲಿ ಕೆರೆಗೆ ಇಳಿದ ಸ್ನೇಹಿತರಿಬ್ಬರು ಸಾವನ್ನಪ್ಪಿದ್ದು, ಮಾರತ್ ಹಳ್ಳಿಯ ಕಾರು ಮಾರಾಟ ಕಂಪನಿಯಲ್ಲಿ ಕೆಲಸ‌ಮಾಡ್ತಿದ್ದ ಸೋಲೆಮನ್ ಹಾಗೂ ಅಭಿಷೇಕ್  ಮೃತರಾಗಿದ್ದಾರೆ.ಮದುವೆ ಮಾಡಿಕೊಳ್ಳುವ ತಯಾರಿಯಲ್ಲಿದ್ದ ಸೊಲೆಮನ್  ಮಂಗಳವಾರ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಈ ಹಿನ್ನೆಲೆ ಪಾರ್ಟಿ ಆಯೋಜಿಸಿದ್ದ. ಪಾರ್ಟಿ ಮುಗಿದ ನಂತರ ಸ್ನೇಹಿತೆರಲ್ಲ ವಾಪಸ್ ಹೋಗಿದ್ರು ಈ ವೇಳೆ ಸೊಲೆಮನ್ ಮತ್ತು ಅಭಿಷೇಕ್, ಸೊಲೆಮನ್ ಈಜಲು ತೆರಳಿದ್ರು.ಚಿಕ್ಕಕಮ್ಮನಹಳ್ಳಿಯ ಕೆರೆಗೆ ಈಜಲು ತೆರಳಿದ್ದು ಶವವಾಗಿ ಬುಧವಾರ ಬೆಳ್ಗಗ್ಗೆ  ಪತ್ತೆಯಾಗಿದ್ದಾರೆ.ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶವ ಮೇಲೆತ್ತಿ ತನಿಖೆ ಮುಂದುವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ