ಚೀಟಿ ವ್ಯವಹಾರದಲ್ಲಿ ವಂಚಿಸಿದ ಭೂಪ

ಬುಧವಾರ, 27 ಜುಲೈ 2022 (19:35 IST)
ನಗರದ ಆರ್ ಟಿ ನಗರ ನಿವಾಸಿಗಳು ಲಕ್ಷಾಂತರ ರೂಪಾಯಿಗಳ ಚೀಟಿ ವ್ಯವಹಾರ ಮಾಡಿದ್ದರು. ಪ್ರತಿವಾರ 20 ಸಾವಿರ ಹಣವನ್ನ ಉಮೇಶ್ ಎಂಬತನಿಗೆ ಕಟ್ಟುತ್ತಿದ್ರು. ಇವನ ಬಳ್ಳಿ ಸುಮಾರು  100 ಕ್ಕೂ ಹೆಚ್ಚು ಜನ ಚೀಟಿ ಹಾಕಿದ್ರು. 20 ಕೋಟಿಗೂ ಅಧಿಕ ಮೌಲ್ಯದ ಹಣ ಕಬಳಿಸಿ ಜನರಿಗೆ ಇದೀಗ ಉಮೇಶ್ ಉಂಡೆನಾಮ ಹಾಕಿದ್ದಾನೆ.
 
ಕೂಲಿನಾಲಿ ಮಾಡುವವರು ,ಪುಟ್ಪಾತ್ ನಲ್ಲಿ ವ್ಯಾಪಾರ ಮಾಡುವವರು ಸೇರದಂತೆ ಅನೇಕ ವಯಸ್ಸಾದವರು ಉಮೇಶ್ ಎಂಬಂತನ ಬಳ್ಳಿ ಚೀಟಿ ಹಾಕಿದ್ರು. ಆದ್ರೆ ಚೀಟಿ ದುಡ್ಡನೇಲ್ಲ ಎತ್ತಿಕೊಂಡು ಪರಾರಿಯಾಗಲು ಹೊಂಚು ಹಾಕಿದ ಅನ್ನಿಸುತ್ತೆ. ಜನ ಹಣಕೇಲು ಹೋದಾಗ ಕುಂಟ ನೆಪ್ಪ ಹೇಳ್ತಿದಾನಂತೆ . ಕೊನೆಗೆ ಇತನ ಬಳ್ಳಿ ಹಣ ಗೊಗರೆದು ಸುಸ್ತಾದ ಜನ ಪೊಲೀಸ್ ಠಾಣೆ ಮೇಟಿಲೇರಿ ದೂರು ನೀಡಿದ್ದಾರೆ.
 
ಇನ್ನು ಚೀಟಿ ವ್ಯವಹಾರದಲ್ಲಿ ಜನರಿಗೆ ಉಂಡೆನಾಮ ಹಾಕಲು ಯತ್ನಿಸಿದ ಉಮೇಶನನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ಕೇಸ್ ಈಗ ಕೋರ್ಟ್ ಮೆಟ್ಟಿಲೇರಿದೆ. ಇನ್ನು ಜನ ಎಲ್ಲಿಯವರೆಗೆ ನಂಬುತ್ತಾರೆ ಅಲ್ಲಿವರೆಗೂ ಮೋಸಮಾಡುವವರು ಇರುತ್ತಾರೆ. ಜನ ಸಿಕ್ಕ ಸಿಕ್ಕದವರ ಹತ್ತಿರ ಚೀಟಿ ವ್ಯವಹಾರ ಮಾಡದೇ ಇನ್ನಾದ್ರು ಎಚ್ಚೇತ್ತುಕೊಂಡ್ರೆ ಒಳ್ಳೆಯದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ