ನಗರದ ಮಾರ್ಕೆಟ್ ನಲ್ಲಿ ಪ್ಲಾಸ್ಟಿಕ್ ಬೀಳ್ತಿಲ್ಲ ಬ್ರೇಕ್

ಬುಧವಾರ, 27 ಜುಲೈ 2022 (19:15 IST)
ಪ್ಲಾಸ್ಟಿಕ್ ಬಳಸದಂತೆ ಸರ್ಕಾರದ ಆದೇಶವಿದ್ರು ಅದನ್ನೇಲ್ಲ ಧಿಕಾರಿಸಿ ನಗರದಲ್ಲಿ ಪ್ಲಾಸ್ಟಿಕ್ ಉಪಯೋಗಿಸಲಾಗ್ತಿದೆ. ಸಣ್ಣಪುಟ್ಟ ಅಂಗಳಿಗಳಿಂದ ದೊಡ್ಡ ಅಂಗಡಿಗಳವರೆಗೂ ಪ್ಲಾಸ್ಟಿಕ್ ಯಥೇಚ್ಛವಾಗಿ ಬಳಸಲಾಗ್ತಿದೆ. ಇನ್ನು ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.ಸಣ್ಣಪುಟ್ಟ ಅಂಗಡಿಗಳು ಸೇರಿದಂತೆ ಬೇಕರಿ , ದಿನಸಿ ಅಂಗಡಿ ಎಲ್ಲ ಕಡೆಯೂ ಪ್ಲಾಸ್ಟಿಕ್ ಕವರ್ ಗಳು ರಾರಾಜಿಸುತ್ತಿದೆ. ಕೆಲವೊಂದು ಭಾಗಗಳಲ್ಲಿ ಸ್ವತಃ ಮಾರ್ಷಲ್ ಗಳು ಫೀಲ್ಡ್ ಗಿಳಿದು ಪರಿಶೀಲನೆ ಮಾಡಿದಾಗ ಪ್ಲಾಸ್ಟಿಕ್ ಯಥೇಚ್ಛವಾಗಿ ಸಿಕ್ಕಿದೆ. ಅದ‌ನ್ನ ವಶಪಡಿಸಿಕೊಂಡು ದಂಡ ಹಾಕಲು ಮುಂದಾಗಿದ್ದಾರೆ. ಅಷ್ಟೇ ಕೆಲವೊಂದು  ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಪರ್ಸಲ್ ಮಾಡಿಕೊಡ್ತಾರೆ.
 
ಇನ್ನು ಅಂಗಡಿಗಳಲ್ಲಿ ಮಾರಾಟಗಾರರನ್ನ ಯಾಕೆ ಪ್ಲಾಸ್ಟಿಕ್ ನಿಷೇಧವಿದ್ರು ಉಪಯೋಗಿಸ್ತೀರಾ ಅಂತಾ ಕೇಳಿದ್ರೆ ಜನರಿಗೆ ಯಾವುದರಲ್ಲಿ ಹಾಕಿ ಕೊಡೋಣ್ಣ ಅಂತಾರೆ. ಇನ್ನು ಪ್ಲಾಸ್ಟಿಕ್ ಕವರ್ ಬದಲಿಗೆ ಬಟ್ಟೆ ಬ್ಯಾಗ್ ಗಳಲ್ಲಿ ಕೆಲವೊಂದು ಪದಾರ್ಥಗಳನ್ನ ಹಾಕಿಕೊಡ್ತಾರೆ.ಆದ್ರೆ ಪ್ಲಾಸ್ಟಿಕ್ ಗಿಂತ ಬಟ್ಟೆ ಕವರ್ ಬೆಲೆ ಜಾಸ್ತಿ.ಹೀಗಾಗಿ ಜನರು ತೆಗೆದುಕೊಳ್ಳಲು ಹಿಂದೆ- ಮುಂದೆ ನೋಡ್ತಾರೆ.ಇನ್ನು 10 ಕೆಜಿ ಮೇಲ್ಪಟ್ಟ ಐಟಂ ತಗೊಂಡ್ರೆ ಪ್ಲಾಸ್ಟಿಕ್ ಕವರ್ ಕೊಡಲೇಬೇಕು .ಇಲ್ಲವಾದರೆ ಜನರು ಗಲಾಟೆ ಮಾಡ್ತಾರೆ ಅಂತಾ ಅಂಗಡಿಯವರು ಪ್ರತಿಕ್ರಿಯಿಸುತ್ತಾರೆ. ಪ್ಲಾಸ್ಟಿಕ್ ನಿಷೇಧವಿದ್ರು ಅಂಗಡಿ- ಮುಂಗಟ್ಟುಗಳಲ್ಲಿ ರಾಜರೋಷವಾಗಿ ಪ್ಲಾಸ್ಟಿಕ್ ಉಪಯೋಗಿಸ್ತಿದ್ದಾರೆ. ಹೀಗಾದ್ರೆ ಪರಿಸರಕ್ಕೆ ಇನ್ನಷ್ಟು ಹಾನಿಯಾಗುತ್ತೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ