ರಾಜೀನಾಮೆ ನೀಡಿರೋ ಶಾಸಕರಿಗೆ ಸ್ಪೀಕರ್ ಬಿಗ್ ಶಾಕ್
ಮಂಗಳವಾರ, 9 ಜುಲೈ 2019 (15:54 IST)
ಸ್ಪೀಕರ್ ಬಿಗ್ ಶಾಕ್ ನೀಡಿದ್ದಾರೆ. ಮೈತ್ರಿ ಸರಕಾರದ ದೋಸ್ತಿ ಪಕ್ಷಗಳ ಶಾಸಕರು ರಾಜೀನಾಮೆ ನೀಡಿರೋದನ್ನು ಸ್ಪೀಕರ್ ಗಂಭೀರವಾಗಿ ಪರಿಗಣಿಸಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಹುತೇಕ ಶಾಸಕರು ಮುಂಬೈಗೆ ಹಾರಿದ್ದಾರೆ. ಕೆಲವು ಶಾಸಕರು ಕ್ರಮ ಬದ್ಧ ರಾಜೀನಾಮೆ ನೀಡಿಲ್ಲ ಎನ್ನಲಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ನ ಒಟ್ಟು 14 ಶಾಸಕರು ರಾಜೀನಾಮೆ ನೀಡಿದ್ದಾರೆ. ಶಾಸಕರು ಖುದ್ದಾಗಿ ಬಂದು ರಾಜೀನಾಮೆ ನೀಡಬೇಕು. ಅದಕ್ಕೆ ಕಾರಣಗಳನ್ನು ಹೇಳಬೇಕು.
ಕಾನೂನು ಸಾಧಕಗಳನ್ನು ಪರಿಶೀಲಿಸಿದ ನಂತರವೇ ಶಾಸಕರ ರಾಜೀನಾಮೆ ಅಂಗೀಕಾರದ ಬಗ್ಗೆ ನಿರ್ಧಾರ ಮಾಡುವುದಾಗಿ ಸ್ಪೀಕರ್ ರಮೇಶ ಕುಮಾರ ಹೇಳಿದ್ದಾರೆ.
ಶಾಸಕರ ರಾಜೀನಾಮೆ ತುರ್ತಾಗಿ ಅಂಗೀಕಾರ ಮಾಡಬೇಕಾದದ್ದೇನಿಲ್ಲ ಎನ್ನುವ ಮೂಲಕ ರಾಜೀನಾಮೆ ನೀಡಿರೋ ಶಾಸಕರಿಗೆ ಶಾಕ್ ನೀಡಿದ್ದಾರೆ.