ಸಾರಿಗೆ ಬಸ್ ಒಪ್ಪಂದದ ಮೇಲೆ ಕೊಂಡೊಯ್ಯುವವರಿಗೆ ಬಿಗ್ ಶಾಕ್

ಗುರುವಾರ, 27 ಜುಲೈ 2023 (15:51 IST)
ಸಾರಿಗೆ ಇಲಾಖೆ ಇಂದ ಮಹತ್ವದ ಆದೇಶ ಹೊರಡಿಸಲಾಗಿದೆ.ಸಾಂದರ್ಭಿಕ ಒಪ್ಪಂದ'ದ ಮೇಲೆ 'KSRTC ಬಸ್' ಕರೆದೊಯ್ಯುವವರಿಗೆ ಬಿಗ್ ಶಾಕ್ ನೀಡಿದೆ.ಒಪ್ಪಂದದ ಮೇಲೆ ಕೊಂಡೊಯ್ಯುವ ಬಸ್ ಗಳ ಕಿ.ಮೀ ದರ ಹೆಚ್ಚಳ ಮಾಡಲಾಗಿದೆ.ಶಕ್ತಿ ಯೋಜನೆಯ ಅನುಷ್ಠಾನದ ಬಳಿಕ ಸಾಮಾನ್ಯ, ವೇಗದೂತ ಹಾಗೂ ನಗರ ಸಾರಿಗೆ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.ಇತ್ತೀಚಿನ ದಿನಗಳಲ್ಲಿ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದರಿಂದಾಗಿ ದರ ಹೆಚ್ಚಳವಾಗಿದೆ.
 
ನೂತನ ಸಾರಿಗೆ ಬಸ್ ಸಾಂದರ್ಭಿಕ ಒಪ್ಪಂದದ ಪರಿಷ್ಕೃತ ದರ ಕರ್ನಾಟಕ ಸಾರಿಗೆಯಲ್ಲಿ 55, 47, 49 ಆಸನಗಳ ಸಂಖ್ಯೆಗಳ ಬಸ್ ಗಳಿಗೆ 350 ಕನಿಷ್ಠ ಕಿಲೋಮೀಟರ್ ನಿಗದಿ ಪಡಿಸಲಾಗಿದೆ.ರಾಜ್ಯದೊಳಗೆ ರೂ.47 ಅನ್ನು ಪ್ರತಿ ಕಿಲೋಮೀಟರ್ ಗೆ ವಾರದ ಎಲ್ಲಾ ದಿನ ನಿಗದಿ ಪಡಿಸಲಾಗಿದೆ.ಅಂತರರಾಜ್ಯ ಸಾಂದರ್ಭಿಕ ಒಪ್ಪಂದಕ್ಕೆ ರೂ.50 ಅನ್ನು ನಿಗದಿ ಪಡಿಸಲಾಗಿದೆ.ರಾಜಹಂಸ ಎಕ್ಸಿಕ್ಯೂಟಿವ್ 36 ಆಸನಗಳ ಬಸ್ಸಿಗೆ ದಿನಕ್ಕೆ 350 ಕಿಲೋಮೀಟರ್ ನಿಗದಿ ಪಡಿಸಿ, ರಾಜ್ಯದೊಳಗೆ ಪ್ರತಿ ಕಿಲೋಮೀಟರ್ ಗೆ ರೂ.48, ಅಂತರರಾಜ್ಯಗಳಿಗೆ ರೂ.53 ನಿಗದಿ ಪಡಿಸಿದೆ.ರಾಜಹಂಸ 39 ಆಸನದ ಬಸ್ಸುಗಳಿಗೆ ದಿನವೊಂದಕ್ಕೆ 350 ಕನಿಷ್ಠ ಕಿ.ಮೀ ಮಿತಿ ಹೇರಿದೆ. ಪ್ರತಿ ಕಿಲೋಮೀಟರ್ ಗೆ ರಾಜ್ಯದೊಳಗೆ ರೂ.51, ರಾಜ್ಯದ ಹೊರಗೆ ರೂ.55 ಅನ್ನು ನಿಗದಿ ಪಡಿಸಲಾಗಿದೆ.
 
ರಾಜಹಂಸ 12 ಮೀಟರ್ ಚಾಸಿಸ್ 44 ಆಸನಗಳ ಬಸ್ ಗಳಿಗೆ 350 ಕನಿಷ್ಠ ಕಿ.ಮೀ ಮಿತಿ ಹೇರಲಾಗಿದೆ.ಪ್ರತಿ ಕಿ.ಮೀಗಳಿಗೆ 53 ರೂ ರಾಜ್ಯದೊಳಗೆ, 57 ರೂ ಅಂತರರಾಜ್ಯಗಳಿಗೆ ಕಿಲೋಮೀಟರ್ ಮಿತಿಯನ್ನು ಹೇರಲಾಗಿದೆ.ಮೈಸೂರು ನಗರ ಸಾರಿಗೆ ಸೆಮಿ ಲೋಪ್ಲೋರ್ 42 ಆಸನದ ಬಸ್ಸುಗಳಿಗೆ 300 ಕನಿಷ್ಠ ಕಿಲೋಮೀಟರ್ ದಿನವೊಂದಕ್ಕೆ ನಿಗದಿ ಪಡಿಸಲಾಗಿದೆ. ರಾಜ್ಯದೊಳಗೆ ಪ್ರತಿ ಕಿಲೋಮೀಟರ್ ಗೆ ರೂ.45 ನಿಗದಿ ಪಡಿಸಲಾಗಿದೆ.ರಾಜ್ಯದೊಳಗೆ ಪ್ರತಿ ಕಿಲೋಮೀಟರ್ ಗೆ ರೂ.45 ನಿಗದಿ ಪಡಿಸಲಾಗಿದೆ.
ಮಿಡಿ ಬಸ್ಸುಗಳಿಗೆ ಪ್ರತಿ ಕಿಲೋಮೀಟರ್ ಗೆ ರೂ.40 ನಿಗದಿಪಡಿಸಲಾಗಿದೆ.ನಾನ್ ಎಸಿ ಸ್ಲೀಪರ್ 32 ಆಸನದ ಬಸ್ಸುಗಳಿಗೆ ಕನಿಷ್ಠ ದಿನಕ್ಕೆ 400 ಕಿಲೋಮೀಟರ್ ಮಿತಿ ನೀಡಿ, ರಾಜ್ಯದೊಳಗೆ ಪ್ರತಿ ಕಿಲೋಮೀಟರ್ ಗೆ ರೂ.55, ರಾಜ್ಯದೊರೆಗೆ 60 ರೂ ನಿಗದಿ ಪಡಿಸಲಾಗಿದೆ.ಇನ್ನೂ ಮೈಸೂರು ನಗರದಲ್ಲಿ ಗಂಟೆಗಳ ಆಧಾರದಲ್ಲಿ ವಾಹನಗಳನ್ನು ಒದಗಿಸುವ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ.ಈ ಪರಿಷ್ಕೃತ ದರಗಳು ದಿನಾಂಕ 01-08-2023ರಿಂದ ಜಾರಿಗೆ ಬರಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸುತ್ತೋಲೆ ಹೊರಡಿಸಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ