ಬಿಎಸ್ವೈಗೆ ಸಂಕಷ್ಟ- ಸರಕಾರ ಕೆಡವುತ್ತೇನೆ ಎಂದ ಬಾಲಚಂದ್ರ ಜಾರಕಿಹೊಳಿ : ಬಿಜೆಪಿಗೆ ಬಿಗ್ ಶಾಕ್
ಮಂಗಳವಾರ, 13 ಆಗಸ್ಟ್ 2019 (16:12 IST)
ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಪತನವಾಗಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುನ್ನುಡಿ ಬರೆದದ್ದು ಹಳೆ ಸುದ್ದಿಯಾಗಿದ್ದರೆ, ಈಗ ಬಿಜೆಪಿ ಸರಕಾರವನ್ನೇ ಕೆಡವುತ್ತೇನೆ ಅಂತ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿ ಬಿಜೆಪಿಗೆ ಶಾಕ್ ನೀಡಿದ್ದಾರೆ.
ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ರಾಜ್ಯ ಸರಕಾರವನ್ನು ಕೆಡವುತ್ತೇನೆ ಅಂತ ಹೇಳುವ ಮೂಲಕ ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ.
ಅರಭಾವಿ ಕ್ಷೇತ್ರದಲ್ಲಿ ನೆರೆ ಪೀಡಿತರೊಂದಿಗೆ ಮಾತನಾಡಿದ ಅವರು, ಸರಕಾರ ಮನೆ ಕಟ್ಟಿಸಿಕೊಡದಿದ್ದರೆ ಸರಕಾರವನ್ನೇ ಕೆಡವುತ್ತೇನೆ. ನಿಮಗೆಲ್ಲರಿಗೂ ಮನೆ ಕಟ್ಟಿಸಿ ಕೊಡುವೆ ಅಂತ ಭರವಸೆ ನೀಡಿದ್ದಾರೆ.
ಸರಕಾರ ಕೆಡವೋ ಶಕ್ತಿ ನನಗಿದೆ. ಹೀಗಾಗಿ ಸರಕಾರ ಮನೆ ಕಟ್ಟಿಸಿಕೊಡದಿದ್ದರೆ ಈ ಸರಕಾರವನ್ನೇ ಉರುಳಿಸುತ್ತೇನೆ ಅಂತ ಬಿ.ಎಸ್.ಯಡಿಯೂರಪ್ಪನವರಿಗೆ ಖಡಕ್ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಈ ಹೇಳಿಕೆಯಿಂದ ಬಿಜೆಪಿ ಪೇಚಿಕೆ ಸಿಲುಕಿದೆ.